ಘಟಪ್ರಭಾ:67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮಕ್ಕೆ ಚಾಲನೆ
67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮಕ್ಕೆ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 16 :
ಸಮೀಪದ ಅರಭಾಂವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕಾರ್ಯಾಲಯದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಕೆಂಚಪ್ಪ ಮಂಟೂರ ಇವರು ಉದ್ಘಾಟಣೆ ಮಾಡಿದರು. ಅಧಕ್ಷರಾದ ರಾಮಪ್ಪ ತಳವಾರ ಇವರು ದ್ವಜಾರೋಹಣವನ್ನು ನೇರವೆರಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೆಂಚಪ್ಪ ಮಂಟೂರ, ಆಡಳಿತ ಮಂಡಲಿಯ ಸದಸ್ಯರಾದ ಡಿ.ಜಿ.ಚಿಗರಿತೋಟ, ಎಲ್.ಟಿ.ಕೋಳಿ, ಎಲ್.ವಾಯ್.ಪೂಜೇರಿ, ಎಮ್.ಎಲ್.ಮಾಳ್ಯಾಗೋಳ, ವಿ.ಬಿ.ಪೂಜೇರಿ, ಎಚ್.ಬಿ.ಚಿಪ್ಪಲಕಟ್ಟಿ, ಎಸ್.ಡಿ.ಅಂತರಗಟ್ಟಿ, ಡಿ.ಎಚ್.ನಿಂಗನ್ನವರ. ಐ.ಎಚ್.ತಮದಡ್ಡಿ. ಎಸ್.ಬಿ.ಶಿಳನವರ, ಡಿ.ಸಿ.ಸಿ.ಬ್ಯಾಂಕಿನ ಪ್ರತಿನಿಧಿಯವರಾದ ಎ.ಎಚ್.ಗಣೇಶವಾಡಿ ಇದ್ದರು.
ಸಂಘದ ಮುಖ್ಯಕಾರ್ಯನಿರ್ವಾಹಕರಾದ ಎನ್.ಬಿ.ಜಡಕೀನ ಕಾರ್ಯಕ್ರಮವನ್ನು 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸತತವಾಗಿ 7 ದಿನಗಳವರೆಗೆ ಸಪ್ತಾಹವನ್ನು ನಡೆಸಿಕೊಂಡು ಹೋಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು