RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ :ಕುರಿ ಬೆದರಿಸುವ ಮೂಲಕ ದೀಪಾವಳಿ ಪಾಡ್ಯ ಹಬ್ಬ ಆಚರಣೆ

ಗೋಕಾಕ :ಕುರಿ ಬೆದರಿಸುವ ಮೂಲಕ ದೀಪಾವಳಿ ಪಾಡ್ಯ ಹಬ್ಬ ಆಚರಣೆ 

ಕುರಿ ಬೆದರಿಸುವ ಮೂಲಕ ದೀಪಾವಳಿ ಪಾಡ್ಯ ಹಬ್ಬ ಆಚರಣೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ನ 17 :

 

 

ಗ್ರಾಮದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಸ್ಥಳೀಯ ಕೆನರಾ ಬ್ಯಾಂಕ್‍ದ ಮುಂದಿರುವ ಬೆಟಗೇರಿ-ಕೌಜಲಗಿ ಮುಖ್ಯ ರಸ್ತೆಯ ಮೇಲೆ ಸೋಮವಾರ ನ.16 ರಂದು ಸಾಯಂಕಾಲ 5.30 ಗಂಟೆಗೆ ಕುರಿ ಬೆದರಿಸಿವ ಮೂಲಕ ದೀಪಾವಳಿ ಪಾಡ್ಯ ಹಬ್ಬವನ್ನು ಸ್ಥಳೀಯರು ಆಚರಿಸಿದರು.
ನಡು ರಸ್ತೆ ಮೇಲೆ ಕಬ್ಬು, ಜೋಳದ ದಂಟು, ಅವರೆ ಹೂ ಗಳಿಂದ ಹಂಪ್ ನಿರ್ಮಿಸಿ ಪೂಜೆ, ನೈವೇದ್ಯ ಸಮರ್ಪಿಸಿ, ಊರಿನಲ್ಲಿರುವ ಎಲ್ಲ ಕುರಿಗಳನ್ನು ಒಂದಡೆ ಸೇರಿಸಿ, ಕುರಿ ಬೆದರಿಸಿದ ಬಳಿಕ ಇಲ್ಲಿಯ ಮನೆಗಳಲ್ಲಿ ಸಗಣಿಯಿಂದ ತಟ್ಟಿದ ಪಾಂಡವ(ಪಾಂಡ್ರವ್ವ)ರನ್ನು ಮನೆಯ ಮಾಳಗಿ ಮೇಲೆ ಕೂಡ್ರಿ (ಕಳುಹಿ)ಸಿದರು.
ಗ್ರಾಮದಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆ ತನಕ ಎಲ್ಲರ ಮನೆಗಳಲ್ಲಿ, ಜೀಪ್, ಟ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ದೇವಿಯ ಆರಾಧನೆ, ಪೂಜೆ ವೈಭವದಿಂದ ನಡೆದು, ಸ್ಥಳೀಯ ಎಲ್ಲ ದೇವಾಲಯಗಳಲ್ಲಿ ಪುರಜನರಿಂದ ಪೂಜಾ, ನೈವೇದ್ಯ ಸಮರ್ಪಿಸುವ ಕಾರ್ಯಕ್ರಮ ಜರುಗಿತು.
ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮದ ಎಲ್ಲ ದೇವಾಲಯಗಳಲ್ಲಿ ದೀಪೋತ್ಸವ, ಮನೆ ಮುಂದೆ ಬೆಳಕಿನಿಂದ ಬೆಳಗುವ ಹಣತೆಗಳ ಸಾಲು, ಮನೆ ಮೇಲೆ ರಂಗು ರಂಗಿನ ಆಕಾಶಬುಟ್ಟಿಗಳು ನೋಡುಗರ ಕಣ್ಮನ ಸೆಳೆದವು. ಎಲ್ಲರ ಮನೆ-ಮನಗಳಲ್ಲಿ ಸಂತಸ ಮಾನೆ ಮಾಡಿತ್ತು. ಮಕ್ಕಳು, ಹೆಣ್ಣುಮಕ್ಕಳು, ಪುರುಷರು ಸೇರಿದಂತೆ ಮನೆ ಮಂದಿಯಲ್ಲಾ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.

Related posts: