RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ

ಘಟಪ್ರಭಾ:ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ 

ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 28 :

 

ದುಪದಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಪ್ರಯತ್ನದಿಂದ ನೀರಾವರಿ ಇಲಾಖೆಯಿಂದ ಎಸ್‍ಸಿಪಿ ಹಾಗೂ ಎಸ್‍ಡಿಪಿ ಯೋಜನೆಯಲ್ಲಿ ಮಂಜೂರಾದ ಸುಮಾರು 20 ಲಕ್ಷ ರೂ.ಗಳ ವೆಚ್ಚದಲ್ಲಿ ಕಂಬಾರ ಮನೆಯಿಂದ ನಾಯಿಕವಾಡಿ ಆಸ್ಪತ್ರೆವರೆಗೆ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಹಿರಿಯರಾದ ಡಿ.ಎಂ.ದಳವಾಯಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ಮಿನಾಕ್ಷಿ ಸುದೀರ ಜೋಡಟ್ಟಿ, ಗ್ರಾ.ಪ ಮಾಜಿ ಅಧ್ಯಕ್ಷ ಎಸ್.ಐ. ಬೆನವಾಡಿ, ತಾ.ಪ ಸದಸ್ಯ ಲಗಮಣ್ಣ ನಾಗಣ್ಣನವರ, ಸುಧೀರ ಜೋಡಟ್ಟಿ, ನಾಗರಾಜ ನಾಯಿಕ, ಗಜಾನನ ಗಾಂವಕರ, ಸಚಿನ ಖಡಬಡಿ, ಜಿ.ಎಸ್.ರಜಪೂತ, ವಿರೇಂದ್ರ ಪಟ್ಟಣಶೆಟ್ಟಿ, ಮಹಾನಿಂಗಪ್ಪ ಹಳ್ಳೂರ, ಡಾ.ಕಿರಣ ವಾಲಿ ಇದ್ದರು.

Related posts: