RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ :ಕನ್ನಡ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನುಪಮವಾಗಿದೆ : ಪ್ರೋ ಚಂದ್ರಶೇಖರ್ ಅಕ್ಕಿ

ಗೋಕಾಕ :ಕನ್ನಡ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನುಪಮವಾಗಿದೆ : ಪ್ರೋ ಚಂದ್ರಶೇಖರ್ ಅಕ್ಕಿ 

ಕನ್ನಡ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನುಪಮವಾಗಿದೆ : ಪ್ರೋ ಚಂದ್ರಶೇಖರ್ ಅಕ್ಕಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 29 :

 
ಕನ್ನಡ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನುಪಮವಾಗಿದೆ ಎಂದು ವಿಶ್ರಾಂತ ಪ್ರೋ ಚಂದ್ರಶೇಖರ್ ಅಕ್ಕಿ ಹೇಳಿದರು

ರವಿವಾರದಂದು ನಗರದ ಬಸವ ತಸ್ಸಂಗ ಸಮಿತಿ ಸಭಾಂಗಣದಲ್ಲಿ ಭಾವಯಾನ ಮಹಿಳಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಬಸವ ತಸ್ಸಂಗ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು
ಮಹಿಳಾ ಸಾಹಿತ್ಯ ಕ್ಷೇತ್ರ ಇಂದು ವಿಸ್ತಾರಗೊಂಡಿದೆ. ವೈಚಾರಿಕ ಮತ್ತು ವೈವಿಧ್ಯಮಯ ಸಾಹಿತ್ಯ ಓದುಗರನ್ನು ತಲುಪುವ ಮೂಲಕ ಅವರನ್ನು ಚಿಂತನಶೀಲರನ್ನಾಗಿಸಿ ಜಾಗೃತಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು.

ಒತ್ತಡ ನಿಗ್ರಹಕ್ಕೆ ಸಂಗೀತ ಮತ್ತು ಸಾಹಿತ್ಯ ಎರಡೂ ಬೇಕು. ಮನಸ್ಸನ್ನು ಅರಳಿಸುವ ಸಾಹಿತ್ಯ ರಚನೆಗೊಳ್ಳಲಿ. ಮನಸ್ಸನ್ನು ಕೆರಳಿಸುವ ಸಾಹಿತ್ಯ ಬೇಡ. ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಸರಕಾರ ಹಲವು ರಚನಾತ್ಮಕ ಕಾರ್ಯ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಮಹಿಳೆಯರು ಜಾಗೃತರಾಗಲಿ ಎಂದು ಹೇಳಿದರು.

ಸಾಹಿತಿ ಭಾರತಿ ಮಧಬಾವಿ ಅವರ ನನ್ನೊಳಗಿನ ನಾನು ಕೃತಿಯನ್ನು ಸಾಹಿತಿ ಡಾ. ವೈ ಎಂ ಯಾಕೋಳಿ ಮತ್ತು ಪುಷ್ಪಾ ಮುರಗೋಡ ಅವರ ದ್ವನಿ ಕವನ ಸಂಕಲನ ಮತ್ತು ವಿಚಾರ ಸಂಕೀರ್ಣ ಕೃತಿಯನ್ನು ಸಾಹಿತಿ ಡಾ. ಸುರೇಶ ಹನಗಂಡಿ ಮತ್ತು ಡಾ.ಗುರುದೇವಿ ಹುಲೆಪ್ಪನವರಮಠ ಅವರು ಪರಿಚಯಿಸಿದರು

ಮಹಾನಂದಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೀವಲಿಲಾ ಪಾಟೀಲ ಸ್ವಾಗತಿಸಿದರು. ಸುಮೀತ್ರಾ ಬ್ರಾರ್ಕಿ ನಿರೂಪಿಸಿದರು ಕೊನೆಯಲ್ಲಿ
ರಾಜೇಶ್ವರಿ ತೋಟಗಿ ವಂದಿಸಿದರು.

ವೇದಿಕೆಯಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸೋಮಶೇಖರ್ ಎಸ್ ಮುರಗೋಡ , ಗುರುಪಾದಪ್ಪ ಮುರಗೋಡ , ಪ್ರೋ ವಸಂತರಾವ ಕುರಕರ್ಣಿ , ಮಹಾಲಿಂಗ ಮಂಗಿ , ಈಶ್ವರಚಂದ್ರ ಬೆಟಗೇರಿ ಸೇರಿದಂತೆ ಇತರರು ಇದ್ದರು.

Related posts: