ಗೋಕಾಕ:ಶುದ್ದವಾದ ಸಂಸಾರದಿಂದ ಜನ್ಮ ಸಾರ್ಥಕವಾಗುತ್ತದೆ : ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
ಶುದ್ದವಾದ ಸಂಸಾರದಿಂದ ಜನ್ಮ ಸಾರ್ಥಕವಾಗುತ್ತದೆ : ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 30 :
ಶುದ್ದವಾದ ಸಂಸಾರದಿಂದ ಜನ್ಮ ಸಾರ್ಥಕವಾಗುತ್ತದೆ ಎಂದು ನದಿಇಂಗಳಗಾವ ಗುರುಲಿಂಗ ದೇವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂಥನ ಮಂಥನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 143ನೇ ಮಾಸಿಕ ಶಿವಾನುಭವ ಗೊಷ್ಠಿಯಲ್ಲಿ ಚಿಂತಕರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸತಿಯನ್ನು ಬಿಟ್ಟು ಉಳಿದೆಲ್ಲ ಸ್ತ್ರೀಯರು ಮಹಾತಾಯಿ ಪಾರ್ವತಿ ಸಮಾನರು ಎಂಬ ಭಾವನೆಯಿಂದ ಬಾಳಿ ಬದುಕಿದರೆ ಸಮಾಜವನ್ನು ಸದೃಢಗೋಳಿಸಲು ಸಾಧ್ಯ ಆ ನಿಟ್ಟಿನಲ್ಲಿ ನಾವೆಲ್ಲರೂ ಬದುಕಬೇಕು. ಗುರು ಮೌನದಿಂದ ಹೇಳಿದ ಮಾತನ್ನು ಶಿಷ್ಯನ್ನು ಜ್ಞಾನದಿಂದ ಅರಿಯಬೇಕು ಅಂದಾಗ ಮಾತ್ರ ಗುರು ಶಿಷ್ಯರ ಸಂಬಂಧ ಕ್ಕೆ ಮೌಲ್ಯ ಬರುತ್ತದೆ. ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ನಮ್ಮ ಜೀವದಲ್ಲಿ ಅಳವಡಿಸಿಕೊಂಡರೆ ಮಾತ್ರ ನಾವು ಅಂದುಕೊಂಡಿದನ್ನು ಸಾಧಿಸಲು ಸಾಧ್ಯವಾಗುವುದು ಎಂದು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು.
ಶಿಕ್ಷಕ ಎಸ್.ಕೆ ಮಠದ ನಿರೂಪಿಸಿ, ವಂದಿಸಿದರು
ವೇದಿಕೆಯಲ್ಲಿ ಬಟಕುರ್ಕಿ ಮಠದ ಬಸವಲಿಂಗ ಮಹಾಸ್ವಾಮಿಗಳು, ಸಾಹಿತಿ ಡಾ.ಸಿ.ಕೆ ನಾವಲಗಿ ಶ್ರೀಮತಿ ಶಕುಂತಲಾ ಕಟ್ಟಿ, ಶ್ರೀಮತಿ ವಿನೂತಾ ನಾವಲಗಿ ಆರ್.ಎಂ ಲುಡಬುಡೆ , ಬಸವರಾಜ ಖಾನಪ್ಪನವರ ಇದ್ದರು.