ಗೋಕಾಕ:ವಾಣಿಜ್ಯ ಸಂಕೀರ್ಣಗಳನ್ನು ಉದ್ಘಾಟಿಸಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ
ವಾಣಿಜ್ಯ ಸಂಕೀರ್ಣಗಳನ್ನು ಉದ್ಘಾಟಿಸಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 30 :
ನಗರದ ಬ್ಯಾಳಿಕಾಟ ಹತ್ತಿರ ನೂತನವಾಗಿ ನಿರ್ಮಿಸಲಾದ ಶೂನ್ಯ ಸಂಪಾದನ ಮಠದ ವಾಣಿಜ್ಯ ಸಂಕೀರ್ಣಗಳನ್ನು ಸೋಮವಾರದಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು , ಸುಣದೋಳಿಯ ಶಿವಾನಂದ ಮಹಾಸ್ವಾಮಿಗಳು , ಜಿ.ಪಂ ಸದಸ್ಯ ಟಿ.ಆರ್.ಕಾಗಲ್, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ,ಪೌರಾಯುಕ್ತ ಶಿವಾನಂದ ಹಿರೇಮಠ, ಮುಖಂಡರುಗಳಾದ ಅಬ್ದುಲ್ ರಹೇಮಾನ ದೇಸಾಯಿ, ಹುಸೇನ ಫನಿಬಂದ್ ,ದುರ್ಗಪ್ಪ ಶಾಸ್ತ್ರಿ ಗೋಲ್ಲರ, ಆಡಳಿತಾಧಿಕಾರಿ ಅಡಿವೇಶ ಗವಿಮಠ, ಬಸವರಾಜ ಹಿರೇಮಠ , ಬಸವನಗೌಡ ಪಾಟೀಲ, ಬಸವರಾಜ ಖಾನಪ್ಪನವರ , ಜಾವೇದ ಗೋಕಾಕ , ಬಸವರಾಜ ಹೂಳ್ಳೇರ, ಲೋಕಯ್ಯಾ ಹಿರೇಮಠ, ಚಂದ್ರಶೇಖರ್ ಕೊಣ್ಣೂರ , ಮಲ್ಲಿಕಾರ್ಜುನ ಈಟಿ , ವಿವೇಕ ಜತ್ತಿ, ಮಹಾಂತೇಶ ವಾಲಿ ಸೇರಿದಂತೆ ಅನೇಕರು ಇದ್ದರು.