ಗೋಕಾಕ:ನಾಗರಿಕರಿಗೆ ರಕ್ಷಣೆ ನೀಡುವ ಪೊಲೀಸರಿಗೆ ಕಾಡುತ್ತಿದೆ ಹಂದಿಗಳ ಕಾಟ
ನಾಗರಿಕರಿಗೆ ರಕ್ಷಣೆ ನೀಡುವ ಪೊಲೀಸರಿಗೆ ಕಾಡುತ್ತಿದೆ ಹಂದಿಗಳ ಕಾಟ
ಗೋಕಾಕ ಸೆ 6: ನಗರದ ನಾಗರಿಕರಿಗೆ ರಕ್ಷಣೆ ನೀಡುವ ಪೋಲೀಸರಿಗೆ ಹಂದಿಗಳಿಂದ ಕಾಟದಿಂದ ತಪ್ಪಿಸುವವರು ಯಾರು ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ. ಈ ಕುರಿತು ಪೊಲೀಸರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗುತ್ತಿದೆ.
ನಗರದ ಬಡಾವಣೆ ಪ್ರದೇಶದಲ್ಲಿರುವ ಪೋಲೀಸ ವಸತಿ ಗೃಹದ ಆವರಣದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು ಚಿಕ್ಕ ಮಕ್ಕಳು ಮನೆಯಿಂದ ಹೊರಗೆ ಬರಲು ಅಂಜುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ವಸತಿ ಗೃಹದ ಆವರಣದಲ್ಲಿ ಹಂದಿಗಳು ಗುಂಪುಗಳಲ್ಲಿ ಸಂಚರಿಸುತ್ತಿವೆ. ಅಲ್ಲದೆ ಆವರಣ ತುಂಬೆಲ್ಲ ಮಲ ವಿಸರ್ಜನೆ ಮಾಡುವದರಿಂದ ರೋಗಗಳು ಹಬ್ಬುವ ಭೀತಿಯು ಪೊಲೀಸರ ಕುಟುಂಬದಲ್ಲಿ ಉಂಟಾಗಿದೆ.
ಈಗ ಸದ್ಯ ನಗರದಲ್ಲಿ ಹಂದಿಗಳನ್ನು ಹಿಡಿದು ಬೇರೆಡೆಗೆ ಸಾಗಿಸುವ ಕಾರ್ಯಾಚರಣೆ ನಗರಸಭೆ ನಡೆಸುತ್ತಿದ್ದು ನಗರಸಭೆ ಅಧಿಕಾರಿಗಳು ಪೋಲೀಸ ಕ್ವಾರ್ಟರ್ಸ ಕಡೆಗೆ ಗಮನ ನೀಡಿ ಆವರಣದಲ್ಲಿ ಸಂಚರಿಸುವ ಹಂದಿಗಳನ್ನು ಬೇರೆಡೆಗೆ ಸಾಗಿಸಬೇಕೆಂದು ಪೊಲೀಸ ಕುಟುಂಬದ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.