ಗೋಕಾಕ:ಕಾಂಗ್ರೆಸ್ ಪಕ್ಷದ 43 ಬೆಳಗಾವಿ ಜಿ.ಪಂ ಸದಸ್ಯರ ಪೈಕಿ 22 ಜನ ಸದಸ್ಯರು ನನ್ನ ಜತೆಗೆ ಇದ್ದಾರೆ : ಸಚಿವ ರಮೇಶ
ಕಾಂಗ್ರೆಸ್ ಪಕ್ಷದ 43 ಬೆಳಗಾವಿ ಜಿ.ಪಂ ಸದಸ್ಯರ ಪೈಕಿ 22 ಜನ ಸದಸ್ಯರು ನನ್ನ ಜತೆಗೆ ಇದ್ದಾರೆ : ಸಚಿವ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ, ನ, 30;
ಕಾಂಗ್ರೆಸ್ ಪಕ್ಷದ 43 ಬೆಳಗಾವಿ ಜಿಲ್ಲಾ ಪಂಚಾಯತ ಸದಸ್ಯರ ಪೈಕಿ 22 ಜನ ಸದಸ್ಯರು ನನ್ನ ಜತೆಗೆ ಇದ್ದಾರೆ. ಇದರಲ್ಲಿ ಎಷ್ಟು ಜನ ಸದಸ್ಯರು ರಾಜೀನಾಮೆ ಕೊಡ್ತಾರೆ ಅಂತಾ ನನಗೆ ಗೊತ್ತಿಲ್ಲ ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ ಸಿಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ಅನಗೋಳಕರ ಅವರು ಬಿಜೆಪಿ ಸೇರ್ಪಡೆ ಆಗುತ್ತಿರುವ ವಿಚಾರವಾಗಿ ಮಾತನಾಡಿ, ಜಿಪಂ ಸದಸ್ಯ ಕೃಷ್ಣ ಅನಗೋಳ್ಕರ್ ರಾಜೀನಾಮೆ ಅವಶ್ಯಕತೆ ಇರಲಿಲ್ಲ. ಇನ್ನು ಮೂರು ತಿಂಗಳ ಅಧಿಕಾರಾವಧಿ ಇದೆ. ಸದ್ಯ ಜಿಲ್ಲಾ ಪಂಚಾಯತಿಯಲ್ಲಿ ಆಪರೇಶನ್ ಕಮಲ ಮಾಡುವದು ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಗ್ರಾಪಂ ಚುನಾವಣೆ ಘೋಷಣೆ ಹಿನ್ನೆಲೆ. ಈ ಪೂರ್ವ ನಿಗದಿಯಾಗಿದ್ದ ನೀರಾವರಿ ಇಲಾಖೆ ಸಭೆಯನ್ನು ಮುಂದುಡಲಾಗಿದೆ. ಕೋವಿಡ್ ನಿಯಂತ್ರಿಸುವ ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣ ಆಗಿದೆ.ಜನ ನಿರ್ಭಯದಿಂದ ತಮ್ಮ ಕೆಲಸದಲ್ಲಿ ತೊಡಗಬೇಕು ಎಂದು ಸಚಿವ ಜಾರಕಿಹೊಳಿ ಹೇಳಿದರು.