RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ: ನವಿಲಮಾಳ ಗ್ರಾಮದಲ್ಲಿ ಕೆಡವಿದ ಬಡವರ ಮನೆಗಳನ್ನು ಶೀಘ್ರದಲ್ಲಿ ನಿರ್ಮಿಸಿ : ಅಶೋಕ ಪೂಜಾರಿ ಆಗ್ರಹ

ಗೋಕಾಕ: ನವಿಲಮಾಳ ಗ್ರಾಮದಲ್ಲಿ ಕೆಡವಿದ ಬಡವರ ಮನೆಗಳನ್ನು ಶೀಘ್ರದಲ್ಲಿ ನಿರ್ಮಿಸಿ : ಅಶೋಕ ಪೂಜಾರಿ ಆಗ್ರಹ 

ನವಿಲಮಾಳ ಗ್ರಾಮದಲ್ಲಿ ಕೆಡವಿದ ಬಡವರ ಮನೆಗಳನ್ನು ಶೀಘ್ರದಲ್ಲಿ ನಿರ್ಮಿಸಿ : ಅಶೋಕ ಪೂಜಾರಿ ಆಗ್ರಹ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 1 :

 

 

ತಾಲೂಕಿನ ನವಿಲಮಾಳ ಗ್ರಾಮದಲ್ಲಿ ಕೆಡವಿದ ಬಡವರ ಮನೆಗಳನ್ನು ಸರಕಾರದಿಂದ ಶೀಘ್ರದಲ್ಲಿ ಮರು ನಿರ್ಮಾಣ ಮಾಡಿ ,ಸಕ್ರಮಮಾಡಿ ಕೊಡಬೇಕೆಂದು ಜೆಡಿಎಸ್ ಮುಖಂಡ ಆಶೋಕ ಪೂಜಾರಿ ಆಗ್ರಹಿಸಿದರು

ಮಂಗಳವಾರದಂದು ನಗರದ ಅವರ ಕಾರ್ಯಾಲದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನವಿಲಮಾಳ ಸಮಿಪ ವಿರುವ ಸರ್ವೆ ನಂ 173 /1 B 140 ಎಕರೆ ಜಮೀನು ಹಾಳು ಬಿದಿದ್ದು ಈ ಜಾಗದಲ್ಲಿ ವಸತಿ ರಹಿತ ಬಡವರು, ಕೂಲಿ ಕಾರ್ಮಿಕರು , ಗೋಕಾಕ ಮಿಲ್ ನ ಕಾರ್ಮಿಕರು ಕಳೆದ ಏಳೆಂಟು ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದಾರೆ. ಇಲ್ಲಿ ನಿರ್ಮಾಣವಾದ ಮನೆಗಳಿಗೆ ಸ್ಥಳೀಯ ಪಂಚಾಯಿತಿನವರು ವಿದ್ಯುತ್ , ನೀರು ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರು ಸಹ ಅವುಗಳನ್ನು ಸಕ್ರಮ ಮಾಡಿಕೊಡದೆ ಸುಮಾರು 32 ಮನೆಗಳನ್ನು ತಹಶೀಲ್ದಾರ ಅವರು ಕೆಡವಿ ರುವುದು ಸರಿಯಲ್ಲ ಎಂದು ಅಶೋಕ ಪೂಜಾರಿ ಅವರು ಆಡಳಿತದ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಸಿದರು.

ಈಗ ರಾಜಕೀಯವಾಗಿ ಅತ್ಯಂತ ಪ್ರಭಾವಿಯಾಗಿರುವ ಸಚಿವ ರಮೇಶ ಜಾರಕಿಹೊಳಿ ಅವರಿಗೆ ರಾಜಕೀಯವಾಗಿ ಭದ್ರ ಬೂನಾದಿಯನ್ನು ಹಾಕಿಕೊಟ್ಟ ಈ ಭಾಗದ ಜನರು ಇಂದು ಸೂರು ಕಳೆದುಕೊಂಡು ಕಂಗಾಲಾಗಿದ್ದಾರೆ. ಇದನ್ನು ಅರ್ಥಮಾಡಿಕೊಂಡು ಸಚಿವರು ಮನೆ ಕಳೆದುಕೊಂಡವರಿಗೆ ಪುನಃ ಸರಕಾರದಿಂದ ಮನೆಗಳನ್ನು ನಿರ್ಮಿಸಿಕೊಟ್ಟು , ಜಾಗವನ್ನು ಸಕ್ರಮ ಮಾಡಿಕೊಟ್ಟು ಅವರಿಗೆ ನ್ಯಾಯ ದೊರಕಿಸಿ ಕೊಡಲು ಮುಂದಾಗಬೇಕೆಂದು ಸಚಿವರಲ್ಲಿ ಅಶೋಕ ಪೂಜಾರಿ ಅವರು ವಿನಂತಿಸಿದರು. ಇದಕ್ಕೆ ತಪ್ಪಿದಲ್ಲಿ ಪಂಚಾಯಿತಿ ಚುನಾವಣೆ ಮುಗಿದ ತಕ್ಷಣ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪೂಜಾರಿ ಅವರು ಇದೇ ಸಂಧರ್ಭದಲ್ಲಿ ಎಚ್ಚರಿಸಿದರು.
ಗೋಕಾಕ ಮಿಲ್ ಪ್ರದೇಶದಲ್ಲಿ ಇರುವ 350 ಎಕರೆ ಮಿಲ್ ನವರಿಗೆ ಗುತ್ತಿಗೆ ಆಧಾರದಲ್ಲಿ ಕೊಟ್ಟ ಸರಕಾರಿ ಸರಕಾರಿ ಜಾಗದಲ್ಲಿ 20× 30 ನಿವೇಶನಗಳನ್ನು ಮಾಡಿ ಬಡವರಿಗೆ , ಕೂಲಿ ಕಾರ್ಮಿಕರಿಗೆ ಹಾಗೂ ವಸತಿ ಹೀನರಿಗೆ ನಿವೇಶನ ನೀಡಲು ಕ್ರಮ ಜರುಗಿಸುವಂತೆ ಸರಕಾರ ಮತ್ತು ಸ್ಥಳೀಯ ಆಡಳಿತಕ್ಕೆ ಉಪ ಚುನಾವಣೆಗೂ ಮುಂಚೆ ಒತ್ತಾಯಿಸಲಾಗಿದ್ದರೂ ಸಹ ಇಲ್ಲಿಯ ವರೆಗೆ ಆ ಬೇಡಿಕೆಯನ್ನು ಪೂರೈಸಲು ಆಗಿಲ್ಲ ಈ ಎಲ್ಲ ಬೇಡಿಕೆಗಳಿಗೆ ಒತ್ತಾಯಿಸಿ ಮುಂದೆ ಹೋರಾಟ ಮಾಡಲಾಗುವುದು ಎಂದು ಅಶೋಕ ಪೂಜಾರಿ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಸುರೇಶ ಮರಲಿಂಗನವರ , ಶಬ್ಬಿರ ಅತ್ತಾರ, ದಸ್ತಗೀರ ಪೈಲವಾನ, ಸಿ.ಬಿ.ಗಿಡನ್ನವರ , ಪ್ರಕಾಶ ಬಾಗೋಜಿ , ಚನ್ನಬಸಪ್ಪ ರುದ್ರಾಪೂರ ಉಪಸ್ಥಿತರಿದ್ದರು

Related posts: