ಘಟಪ್ರಭಾ:ರಾಜ್ಯ ಬಂದಗೆ ಬೆಂಬಲಸಿ ಘಟಪ್ರಭಾದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ
ರಾಜ್ಯ ಬಂದಗೆ ಬೆಂಬಲಸಿ ಘಟಪ್ರಭಾದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಡಿ 5 :
ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ನೀಡಿದ ರಾಜ್ಯ ಬಂದಗೆ ಘಟಪ್ರಭಾದಲ್ಲಿ ನೀರಸ ಪ್ರತಿಕ್ರೀಯೇ ವ್ಯಕ್ತವಾಯಿತು.
ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಜಮಾಯಿಸಿದ ವಿವಿಧ ಕನ್ನಡ ಪರ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷನೆಗಳನ್ನು ಕೂಗಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾನಾಡಿದ ಅನೇಕ ಕನ್ನಡ ಹಾಗೂ ದಲಿತ ಪರ ಸಂಘಟನೆಗಳ ಮುಖಂಡರು, ರಾಜ್ಯ ಸರ್ಕಾರ ಕೇವಲ ರಾಜಕೀಯ ಲಾಭಕ್ಕಾಗಿ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. ಸರ್ಕಾರ ನಿಗಮ ಅಥವಾ ಪ್ರಾಧಿಕಾರ ಸ್ಥಾಪಿಸುವ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕೇವಲ ಚುನಾವಣೆ ದೃಷ್ಠಿಯಿಂದ ಮರಾಠ ಸಮಾಜದ ಮತಗಳನ್ನು ಪಡೆಯುವ ದುರುದ್ದೇಶದಿಂದ ಈ ಕೃತ್ಯವೆಸಗಿದೆ.
ಸದಾ ನಾಡ ದ್ರೋಹಿ ಎಂ.ಇ.ಎಸ್ ಸಂಘಟನೆಗೆ ಬೆಂಬಲ ನೀಡುವ ಮರಾಠರ ಧೋರನೆ ಖಂಡನೀಯವಾಗಿದ್ದು, ಕನ್ನಡಪರ ಹೋರಾಟಗಾರರನ್ನು ರೋಲ್ ಕಾಲ ಹೋರಾಟಗಾರು ಅಂತ ಕರೆದರಿರುವ ಬಿಜೆಪಿ ಶಾಸಕ ಬಸನಗೌಡಾ ಪಾಟೀಲ (ಯತ್ನಾಳ) ಕನ್ನಡಿಗರಲ್ಲಿ ಕೂಡಲೇ ಕ್ಷಮೆ ಕೆಳಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಅರಭಾಂವಿ ನಾಡ ಕಛೇರಿ ಉಪ ತಹಶೀಲ್ದಾರ ಎಸ್.ಎಚ್.ಭೂವಿ ಅವರಿಗೆ ಪ್ರತಿಭಟಣಾಕಾರರಿಂದ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ, ಕನ್ನಡ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಸಮತಾ ಸೈನಿಕದಳ, ಭೀಮ ಆರ್ಮಿ ಸೇದಂತೆ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಪ್ಪಾಸಾಬ ಮುಲ್ಲಾ, ಶ್ರೀಕಾಂತ ಮಹಾಜನ, ಕೆಂಪಣ್ಣಾ ಚೌಕಶಿ, ಮುದಕಪ್ಪಾ ಕುಡ್ಡಗೋಳ, ರಹಮಾನ ಮೊಕಾಶಿ, ಮಾರುತಿ ಚೌಕಶಿ, ಅರ್ಜುನ ಗಂಡವ್ವಗೋಳ, ಶಂಕರ ಸಣ್ಣಕ್ಕಿ, ಡಾ.ರಾಘವೇಂದ್ರ ಪತ್ತಾರ ಸೇರಿದಂತೆ ಅನೇಕರು ಇದ್ದರು.