RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:ಹಂತಕರ ವಿರುದ್ಧ ಮುಂದುವರೆದ ಪ್ರತಿಭಟನೆ : ತಕ್ಷಣ ದುಷ್ಕರ್ಮಿಗಳ ಬಂಧಿಸಲು ಪತ್ರಕರ್ತರ ಒತ್ತಾಯ

ಘಟಪ್ರಭಾ:ಹಂತಕರ ವಿರುದ್ಧ ಮುಂದುವರೆದ ಪ್ರತಿಭಟನೆ : ತಕ್ಷಣ ದುಷ್ಕರ್ಮಿಗಳ ಬಂಧಿಸಲು ಪತ್ರಕರ್ತರ ಒತ್ತಾಯ 

ಹಂತಕರ ವಿರುದ್ಧ ಮುಂದುವರೆದ ಪ್ರತಿಭಟನೆ : ತಕ್ಷಣ ದುಷ್ಕರ್ಮಿಗಳ ಬಂಧಿಸಲು ಪತ್ರಕರ್ತರ ಒತ್ತಾಯ

ಘಟಪ್ರಭಾ ಸೆ 7: ಹಿರಿಯ ಪತ್ರಕರ್ತೆ, ವಿಚಾರವಾದಿಗಳು, ಚಿಂತಕರಾದ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕೆಂದು ಗುರುವಾರದಂದು ಇಲ್ಲಿಯ ಮೃತ್ಯುಂಜಯ ವೃತ್ತದಲ್ಲಿ ಕಾರ್ಯನಿರತ ಪತ್ರಕರ್ತರು, ರೈತ ಸಂಘ, ಕನ್ನಡ ಸೇನೆ ಕರ್ನಾಟಕ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯ ಹೆದ್ದಾರಿ ತಡೆದು ಕೆಲ ಗಂಟೆಕಾಲ ಪ್ರತಿಭಟಿಸಿದರು.

ಪ್ರತಿಭಟನಾಕಾರರನ್ನು ಉದ್ದೆಶಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎಂ.ಜಿ.ಮುಚಳಂಬಿ ಗೌರಿ ಲಂಕೇಶ ಅವರನ್ನು ಹತ್ಯಗೈದ ಕೊಲೆಗಡುಕರನ್ನು ಸರಕಾರ ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸಾಹಿತಿ ಡಾ| ಎಂ.ಎಂ.ಕಲಬುರ್ಗಿ ಅವರ ಹತ್ಯೆ ಇದೇ ತರಹ ನಡೆದಿತ್ತು. ಗೌರಿ ಲಂಕೇಶ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದು ಖಂಡಿನೀಯ. ರಾಜ್ಯದಲ್ಲಿ ವಿಚಾರವಾದಿ, ಸಾಹಿತಿ, ಪತ್ರಕರ್ತರಿಗೆ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ಮುಂದೆ ಇಂತಹ ಅನಾಹುತಗಳಿಗೆ ಅವಕಾಶ ನೀಡದೇ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರಿಗೆ ತಕ್ಕ ಶಿಕ್ಷೆ ನೀಡಬೇಕು. ಈ ಘಟನೆ ಕುರಿತು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರಲ್ಲದೇ ಗೌರಿ ಲಂಕೇಶ ಶೋಷಿತರ, ರೈತರ, ದಲಿತ, ಮಹಿಳೆಯರ ಪರ ಧ್ವನಿಯಾಗಿದ್ದರು. ಗೌರಿ ಲಂಕೇಶ ಅವರನ್ನು ಗುಂಡಿಕ್ಕಿ ಹತ್ಯಗೈದಿದ್ದು ಅಕ್ಷಮ್ಯ ಅಪರಾಧ. ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ತಕ್ಷಣದಲ್ಲಿ ಗೌರಿ ಲಂಕೇಶ ಅವರನ್ನು ಹತ್ಯಗೈದವರನ್ನು ಬಂಧಿಸಬೇಕೆಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಭೀಮಶಿ ಗದಾಡಿ, ಗಣೇಶ ಗಾಣಿಗ, ಜಿ.ಎಸ್.ರಜಪೂತ, ವಿಠ್ಠಲ ಕರೋಶಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಪತ್ರಕರ್ತರಾದ ಚಂದ್ರಶೇಖರ ದೊಡಮನಿ, ರಮೇಶ ಜಿರಲಿ, ದಿಲಾವರ ಬಾಳೇಕುಂದ್ರಿ, ಸಲೀಂ ಕಬ್ಬೂರ, ಅಪ್ಪಾಸಾಬ ಮುಲ್ಲಾ, ಫಾರೂಖ ಮುಲ್ಲಾ, ಸುಭಾಸ ಗಾಯಕವಾಡ, ನಾಗರಾಜ ಚಚಡಿ, ರೈತ ಸಂಘದ ಕಾರ್ಯಕರ್ತರು, ಕನ್ನಡ ಸೇನೆ ಕರ್ನಾಟಕದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Related posts: