RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ : ದೇಮೇಂದ್ರ ಪೋರವಾಲ

ಗೋಕಾಕ:ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ : ದೇಮೇಂದ್ರ ಪೋರವಾಲ 

ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ : ದೇಮೇಂದ್ರ ಪೋರವಾಲ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 6 :

 
ಸೇವಾ ಮನೋಭಾವದಿಂದ ಜಗತ್ತಿನಾದ್ಯಂತ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಪ್ರಾಂತ ಪಾಲರ ಪ್ರತಿನಿಧಿ ದೇಮೇಂದ್ರ ಪೋರವಾಲ ಹೇಳಿದರು

ಶನಿವಾರ ಸಂಜೆ ನಗರದ ರೋಟರಿ ರಕ್ತ ಬಂಡಾರ ಕೇಂದ್ರದ ಸಭಾಂಗಣದಲ್ಲಿ ಇಲ್ಲಿಯ ರೋಟರಿ ಸಂಸ್ಥೆಯ 51ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಜಗತ್ತಿನಾದ್ಯಂತ ರೋಟರಿ ಸಂಸ್ಥೆ ಪೋಲಿಯೋ ನಿರ್ಮೂಲನೆ ಕಾರ್ಯಕ್ರಮದಲ್ಲಿ ವಿಶಿಷ್ಟ ಪಾತ್ರವಹಿಸಿದೆ. ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ಜನಪರ ಕಾರ್ಯಮಾಡುತ್ತಿದೆ. ಇಲ್ಲಿಯ ರೋಟರಿ ಸಂಸ್ಥೆ ರಕ್ತಬಂಡಾರ ಕೇಂದ್ರ , ಮುಕ್ತಿ ವಾಹನಗಳನ್ನು ಸಮಾಜಕ್ಕೆ ನೀಡಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ವಂದಿಸಿ ಮಾದರಿಯಾಗಿ ಕಾರ್ಯಮಾಡಿದೆ. ಸ್ವಯಂ ಉದ್ಯೋಗಕ್ಕೆ ಸಹಾಯ ಶೈಕ್ಷಣಿಕ ಪ್ರಗತಿಗೆ ವಿಶೇಷ ಕೊಡುಗೆಗಳನ್ನು ನೀಡಿ ತರಬೇತಿ ಶಿಬಿರಗಳನ್ನು ಆಯೋಜಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತಾ ಜನ ಮನ ಗೆದ್ದಿದೆ. ಇಂದು ಸಂಸ್ಥೆಯು ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿರುವುದು ಸಂತಸದ ಸಂಗಂತಿಯಾಗಿದ್ದು, ಸಂಸ್ಥೆಯಿಂದ ಇನ್ನು ಹೆಚ್ಚಿನ ಸೇವೆಗಳು ಸಮಾಜಕ್ಕೆ ಸಿಗಲೇಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಆದರ್ಶ ಶಿಕ್ಷಕರನ್ನು ಸತ್ಕರಿಸಿ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಉಪ ಪ್ರಾಂಥಪಾಲ ರಾಜು ಮೆಟ್ಟಗುಡ್ಡ , ಇಲ್ಲಿನ ರೋಟರಿ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಕಡಕೋಳ, ಕಾರ್ಯದರ್ಶಿ ರಾಜು ವರದಾಯಿ, ರೋಟರಿ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳಿ, ಕಾರ್ಯದರ್ಶಿ ಸೋಮಶೇಖರ್ ಮಗದುಮ್ಮ, ಇನರವ್ಹೀಲ ಸಂಸ್ಥೆಯ ಅಧ್ಯಕ್ಷೆ ರೂಪಾ ಮುನವಳ್ಳಿ , ಕಾರ್ಯದರ್ಶಿ ಜ್ಯೋತಿ ವರದಾಯಿ ಇದ್ದರು
ಕಾರ್ಯಕ್ರಮವನ್ನು ಸತೀಶ ನಾಡಗೌಡ ಸ್ವಾಗತಿಸಿದರು. ಸತೀಶ ಬೆಳಗಾವಿ ವಂದಿಸಿದರು.

Related posts: