RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ: 8 & 9 ನೇ ತರಗತಿಯ ಪ್ರವೇಶಕ್ಕೆ ರೋಸ್ಟರ್ ಆಧಾರದ ಮೇಲೆ ಅರ್ಜಿ ಆಹ್ವಾನ : ಶಿಕ್ಷಣಾಧಿಕಾರಿ ಬಳಗಾರ

ಗೋಕಾಕ: 8 & 9 ನೇ ತರಗತಿಯ ಪ್ರವೇಶಕ್ಕೆ ರೋಸ್ಟರ್ ಆಧಾರದ ಮೇಲೆ ಅರ್ಜಿ ಆಹ್ವಾನ : ಶಿಕ್ಷಣಾಧಿಕಾರಿ ಬಳಗಾರ 

8 & 9 ನೇ ತರಗತಿಯ ಪ್ರವೇಶಕ್ಕೆ ರೋಸ್ಟರ್ ಆಧಾರದ ಮೇಲೆ  ಅರ್ಜಿ ಆಹ್ವಾನ : ಶಿಕ್ಷಣಾಧಿಕಾರಿ ಬಳಗಾರ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 8 :

ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ  ಪ್ರಸಕ್ತ ಸಾಲಿನ 8 ಮತ್ತು 9ನೇ ತರಗತಿಯಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು   ರೋಸ್ಟರ್ ಆಧಾರದ ಮೇಲೆ ಅರ್ಜಿ  ಆಹ್ವಾನಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಜಿ‌.ಬಿ.ಬಳಗಾರ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು 8ನೇ ತರಗತಿಯಲ್ಲಿ 2 ಮತ್ತು 9 ನೇ ತರಗತಿಯಲ್ಲಿ 7 ಸ್ಥಾನಗಳು ಖಾಲಿ ಇದ್ದು, ಆಸಕ್ತ ವಿದ್ಯಾರ್ಥಿಗಳು ಡಿ. 12, 2020 ರ ಒಳಗಾಗಿ ಸರಕಾರಿ ಆದರ್ಶ ವಿದ್ಯಾಲಯ ಖನಗಾಂವ ಇವರಿಂದ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸುವಂತೆ ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲೆಯ ಮುಖ್ಯ ಶಿಕ್ಷಕ ವೈ.ಎಚ್.ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊ:  9448630032 ಗೆ ಸಂಪರ್ಕಿಸಲು ಶಿಕ್ಷಣಾಧಿಕಾರಿ ಬಳಗಾರ ಕೋರಿದ್ದಾರೆ

Related posts: