ನೇಗಿನಹಾಳ :ತಂದೆ ತಾಯಿಯ ಸೇವೆಯಿಂದ ಜೀವನ್ಮುಕ್ತಿ: ಬೈಲೂರು ನಿಜಗುಣಾನಂದ ಶ್ರೀ ಅಭಿಮತ
ತಂದೆ ತಾಯಿಯ ಸೇವೆಯಿಂದ ಜೀವನ್ಮುಕ್ತಿ: ಬೈಲೂರು ನಿಜಗುಣಾನಂದ ಶ್ರೀ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ನೇಗಿನಹಾಳ ಡಿ 10 :
ಪ್ರಪಂಚದ ಇತಿಹಾಸದ ಪುಟಗಳಲ್ಲಿ ನೋಡಿದಾಗ ಕೆಟ್ಟ ಮಕ್ಕಳು ಜನಿಸಿರಬಹುದು ಆದರೆ ಕೆಟ್ಟ ತಂದೆ-ತಾಯಿಗಳು ಜನಿಸಲು ಸಾಧ್ಯವಿಲ್ಲ ಮಕ್ಕಳಾದವರು ವಯಸ್ಸಾದ ತಂದೆ-ತಾಯಿಗಳ ಮೇಲೆ ಪ್ರೀತಿ-ಪ್ರೇಮ, ತೋರುವ ಮೂಲಕ ಸೇವೆಯನ್ನು ಮಾಡಬೆಕೆಂದು ಬೈಲೂರು ಮುಂಡರಗಿ ತೋಂಟದಾರ್ಯ ಜಗದ್ಗುರು ನಿಜಗುಣಾನಂದ ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ವಿಠ್ಠಲ-ರುಕ್ಮೀಣಿ ದೇವಸ್ಥಾನದಲ್ಲಿ ಸಂತ ಜ್ಞಾನದೇವ ಹಾಗೂ ತುಕಾರಾಮ ಮಹರಾಜರ ಮೂರ್ತಿ ಪ್ರತಿಷ್ಠಾಪನೆಯ ೫ನೆಯ ವಾರ್ಷೀಕೋತ್ಸದ ನಿಮಿತ್ತ ಆಯೋಜಿಸಿದ್ದ ಸಂತರ ಮಹಾತ್ಮೆ ಎಂಬ ಪ್ರವಚನ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು. ಆದಿ ಜಗದ್ಗುರು ಶಂಕರಾಚಾರ್ಯರ ತಾಯಿ ಮರಣ ಹೊಂದಿದಾಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಯಿಯ ಮುಖ ನೋಡಬೇಕೆಂದು ಬಂದಾಗ ಅಲ್ಲಿದ್ದ ಸಮಾಜ ಭಾಂದವರು ನೀನು ಸನ್ಯಾಸತ್ವ ಸ್ವೀಕರಿಸಿದ್ದ ಕಾರಣ ಅಂತಸಂಸ್ಕಾರಕ್ಕೆ ಆಗಮಿಸಿದ್ದು ತಪ್ಪೆಂದು ಎಲ್ಲರೂ ದೂರಸರಿದು ಬಿಟ್ಟರು ಆಗ ನಾನು ಜಗತ್ತಿಗೆ ಗುರುವಾಗಿರಬಹುದು ಆದರೆ ನನ್ನ ತಾಯಿಗೆ ಮಗನೆಂದು ಹೇಳುತ್ತಾ ತನ್ನ ತಾಯಿಯನ್ನು ಅಂಗೈಯಲ್ಲಿ ಹೊತ್ತುಕೊಂಡು ನಡೆದು ಶವಸಂಸ್ಕಾರ ನೆರೆವೆರಿಸಿದರು. ಹೀಗಾಗಿ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ತನ್ನ ತಂದೆ-ತಾಯಿಗೆ ಮಗನೆ ಎಂಬುವುದನ್ನು ಅರಿತು ನಡೆಯಬೇಕೆಂದು ಹೇಳಿದರು.
ಪ್ರವಚನಕಾರ ಇಬ್ರಾಹಿಂ ಸುತಾರ ಮಾತನಾಡಿ ಸರ್ವಶ್ರೇಷ್ಠನಾದ ಪರಮಾತ್ಮ ಅರಿವಿನ ಮನುಷ್ಯ ಜನ್ಮವನ್ನು ನೀಡಿ ಆಯುಷ್ಯ, ಆರೋಗ್ಯ, ಭೋಗ ಭಾಗ್ಯಗಳ ನೀಡಿದ್ದಾನೆ ಹೀಗಾಗಿ ನಾವೆಲ್ಲರೂ ಶರಣರ, ಸಂತರ, ಮಹಾತ್ಮರ ಸ್ಮರಣೆಯನ್ನು ಮಾಡುವ ಮೂಲಕ ಉತ್ತಮ ಬದುಕು ನಮ್ಮದಾಗಿಸಿಕೊಳ್ಳಬೆಕೆಂದು ಹೇಳಿದರು.
ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಬಸವ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ ಸಂತರ, ಶರಣರ ಮಹಾತ್ಮರ ಸಾಮಾಜಿಕ ಧಾರ್ಮಿಕ ಕೊಡುಗೆಗಳನ್ನು ಗುರುಗಳ ಮೂಲಕ ತಿಳಿದು ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ, ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಬಸವರಾಜ ಕುಲ್ಲೋಳ್ಳಿ, ರುದ್ರಪ್ಪ ಬುಡ್ಡಪ್ಪನವರ, ಗೂಳಪ್ಪ ಶಿವನಾಯ್ಕರ, ಸಿದ್ದಪ್ಪ ಕಾರಿಮನಿ, ಭೀಮಪ್ಪ ಪಡದಪ್ಪನವರ, ಬಾಳಪ್ಪ ಕೊಡಿ, ಬಸಪ್ಪ ಬಜೇರಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಗುಡಿ ಓಣಿಯ ಬಸವೇಶ್ವರ ಭಜನಾ ತಂಡದರು ವಚನ ಪ್ರಾರ್ಥನೆ ಸಲ್ಲಿಸಿದರು.
ಸತೀಶ ಕಾರಿಮನಿ ಸ್ವಾಗತಿಸಿದರು, ದೇಮಪ್ಪ ಪಡದಪ್ಪನವರ ನಿರೂಪಿಸಿದರು, ರಾಮಣ್ಣಾ ತೋರಣಗಟ್ಟಿ ವಂದಿಸಿದರು