ಗೋಕಾಕ:ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಗೋಕಾದಲ್ಲಿ ಪ್ರತಿಭಟನೆ
ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಗೋಕಾದಲ್ಲಿ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 11 :
ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಬೆಂಬಲಿಸಿ ಇಲ್ಲಿನ ಕೆ.ಎಸ್.ಆರ್.ಟಿ ಸಿ ನೌಕರರು ಶುಕ್ರವಾರದಂದು ಪ್ರತಿಭಟನೆ ನಡೆಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸ ನಿಲ್ದಾಣದಲ್ಲಿ ಸೇರಿದ ನೂರಾರು ನೌಕರರು ಇತರ ಇಲಾಖೆ ನೌಕರರಿಗೆ ನೀಡುವ ಎಲ್ಲ ಸವಲತ್ತುಗಳನ್ನು ಸಾರಿಗೆ ನೌಕರರಿಗೂ ನೀಡುವಂತೆ ಬಸಗಳನ್ನು ಬಂದ್ ಮಾಡಿ ಸರಕಾರವನ್ನು ಒತ್ತಾಯಿಸಿದರು. ಸಾರಿಗೆ ನೌಕರರು ಬಸ್ ಸಂಚಾರ ಬಂದ ಮಾಡಿದ್ದರಿಂದ ನಗರದಿಂದ ಬೇರೆ ಬೇರೆ ಊರಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಪರಿದಾಡಿದರು.