RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಗೋಕಾಕ ಶಿಕ್ಷಣ ಸಂಸ್ಥೆಯವರಿಂದ ನಗರಸಭೆ ಅಧ್ಯಕ್ಷ , ಉಪಾಧ್ಯಕ್ಷರಿಗೆ ಸತ್ಕಾರ

ಗೋಕಾಕ:ಗೋಕಾಕ ಶಿಕ್ಷಣ ಸಂಸ್ಥೆಯವರಿಂದ ನಗರಸಭೆ ಅಧ್ಯಕ್ಷ , ಉಪಾಧ್ಯಕ್ಷರಿಗೆ ಸತ್ಕಾರ 

ಗೋಕಾಕ ಶಿಕ್ಷಣ ಸಂಸ್ಥೆಯವರಿಂದ ನಗರಸಭೆ ಅಧ್ಯಕ್ಷ , ಉಪಾಧ್ಯಕ್ಷರಿಗೆ ಸತ್ಕಾರ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 16 :

 
ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಇಲ್ಲಿನ ನಗರಸಭೆಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಮತ್ತು ಉಪಾಧ್ಯಕ್ಷ ಬಸವರಾಜ ಅರೆನ್ನವರ ಅವರನ್ನು ಮಂಗಳವಾರದಂದು ಜೆಎಸ್ಎಸ್ ಕಾಲೇಜಿನ ಸಭಾಂಗಣದಲ್ಲಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ ವ್ಹಿ.ಎ ಕಡಕೋಳ, ವಿಶ್ವಸ್ಥ ಮಂಡಳಿ ಚೇರಮನ್ ಡಾ.ಯು ಬಿ.ಆಜರಿ , ನಿರ್ದೇಶಕರುಗಳಾದ ಡಾ. ಎಸ್.ಎಂ ಕಲ್ಯಾಣಶೇಟ್ಟಿ, ಡಾ.ವ್ಹಿ.ಬಿ ಉಪ್ಪಿನ , ಪಿ.ಎಂ ಕೋಲಾರ, ಎನ್.ಸಿ ಪಟ್ಪಣಶೇಟ್ಟಿ, ಎಸ್.ಎಂ ಮುನವಳ್ಳಿ, ಕಾರ್ಯದರ್ಶಿ ಆರ್.ಎಂ ವಾಲಿ, ಪ್ರಾಚಾರ್ಯರಾದ ಡಾ.ಎಸ್.ಎಸ್.ತೇರದಾಳ, ವ್ಹಿ.ವ್ಹಿ ಮೋದಿ, ಮುಖ್ಯೋಪಾಧ್ಯಾಯರಾದ ಎಸ್.ಕೆ ಮಠದ, ವಾಯ್.ಬಿ ಕೋಪ್ಪದ ಇದ್ದರು.

Related posts: