RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಶಾಂತಿ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಸಕಲ ಸಿದ್ಧತೆ : ತಹಶೀಲ್ದಾರ ಪ್ರಕಾಶ ಮಾಹಿತಿ

ಗೋಕಾಕ:ಶಾಂತಿ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಸಕಲ ಸಿದ್ಧತೆ : ತಹಶೀಲ್ದಾರ ಪ್ರಕಾಶ ಮಾಹಿತಿ 

ಶಾಂತಿ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಸಕಲ ಸಿದ್ಧತೆ : ತಹಶೀಲ್ದಾರ ಪ್ರಕಾಶ ಮಾಹಿತಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 21 :

 
ತಾಲೂಕಿನ ಒಟ್ಟು 32 ಗ್ರಾಮ ಪಂಚಾಯಿತಿಗಳಿಗೆ ನಾಳೆ ದಿ.22 ರಂದು ಚುನಾವಣೆ ನಡೆಯಲಿದ್ದು , ಶಾಂತಿ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಯಾವುದೇ ರೀತಿಯ ನ್ಯೂನತೆ ಬಾರದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು.

ಸೋಮವಾರದಂದು ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾ.ಪಂ ಚುನಾವಣೆಗೆ ಒಟ್ಟು 283 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 43 ಅತೀ ಸೂಕ್ಷ್ಮ ಹಾಗೂ 97 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ ಸೂಕ್ತ ಪೊಲೀಸ ಬಂದೋಬಸ್ತ್ ಮಾಡಲಾಗಿದೆ. 35 ಚುನಾವಣಾಧಿಕಾರಿಗಳು, 39 ಸಹಾಯಕ ಚುನಾವಣಾಧಿಕಾರಿಗಳು, 6 ಸೇಕ್ಟೇರ್ ಆಫೀಸರಗಳನ್ನು ನೇಮಕ ಮಾಡಲಾಗಿದ್ದು, ಚುನಾವಣೆ ಕರ್ತವ್ಯಕ್ಕೆ ತೆರಳಲು ಒಟ್ಟು 47 ಮಾರ್ಗಗಳನ್ನು ಗುರುತಿಸಿ 38 ಬಸ್ಸ ಹಾಗೂ 9 ಜೀಪಗಳ ವ್ಯವಸ್ಥೆ ಮಾಡಲಾಗಿದೆ.

ಒಟ್ಟು 620 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಸಿಲಾಗಿಲ್ಲ , 61 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 544 ಸ್ಥಾನಗಳಿಗೆ ಒಟ್ಟು 1554 ಅಭ್ಯರ್ಥಿಗಳು ಚುನಾವಣೆಗೆ ಸ್ವರ್ಧಿಸಿದ್ದು , ಒಟ್ಟು 1,90,155 ಮತದಾರರು ಮತ ಚಲಾಯಿಸಲ್ಲಿದ್ದಾರೆ. ಡಿಸೆಂಬರ್ 30 ರಂದು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ ನೀಡಿದರು

Related posts: