ಮೂಡಲಗಿ :ಅಭಿವೃದ್ಧಿ ಸಹಿಸದ ಕೆಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹಾಕಿದ್ದಾರೆ : ಗಡಾದ ಆಕ್ರೋಶ
ಅಭಿವೃದ್ಧಿ ಸಹಿಸದ ಕೆಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹಾಕಿದ್ದಾರೆ : ಗಡಾದ ಆಕ್ರೋಶ
ಮೂಡಲಗಿ ಸೆ 8: ಸೆ.6 ರಂದು ಸರಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಮೂಡಲಗಿ ಕೈಬಿಟ್ಟು ಉಡಪಿ ಜಿಲ್ಲೆಯ ಹೆಬ್ರಿ ಪಟ್ಟಣವನ್ನು ಹೊಸ ತಾಲೂಕನ್ನಾಗಿ ಘೋಷಿಸಿರುವುದಕ್ಕೆ ಮಾಹಿತಿಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ಕುರಿತು ಪ್ರಕಟಣೆ ನೀಡಿರುವ ಅವರು ಮೂಡಲಗಿ ತಾಲೂಕ ಕೇಂದ್ರವಾದಲ್ಲಿ ಗೋಕಾಕದ ಎಲ್ಲ ವ್ಯವಹಾರಗಳಿಗೆ ಬ್ರೇಕ ಬಿದ್ದು ಮೂಡಲಗಿ ಮಾತ್ರ ಅಭಿವೃದ್ಧಿ ಆಗುತ್ತದೆ ಎಂಬ ಕಲ್ಪನೆಯಿಂದ ಹಾಗೂ ಈ ಭಾಗದ ಅಭಿವೃದ್ಧಿ ಸಹಿಸದ ಕೆಲ ಜನಪ್ರತಿನಿಧಿಗಳು ಉದ್ದೇಶ ಪೂರ್ವಕವಾಗಿ ಮೂಡಲಗಿ ತಾಲೂಕ ಕೈಬಿಡುವಂತೆ ಸರಕಾರದ ಮೇಲೆ ಒತ್ತಡ ಹಾಕಿದ್ದಾರೆ ಎಂದು ಭೀಮಪ್ಪ ಗಡಾದ ಆರೋಪಿಸಿದ್ದಾರೆ.
ಇಂತಹ ನೀಚ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ತಕ್ಕ ಪಾಠ ಕಲಿಸುವ ಸಮಯ ದೂರವಿಲ್ಲ .
ಮೂಡಲಗಿ ತಾಲೂಕ ಕೇಂದ್ರದ ಕುರಿತು ಹೋರಾಟದ ರೂಪರೇಷೆಗಳನ್ನು ಅತೀ ಶೀಘ್ರದಲ್ಲೇ ಕೈಗೊಂಡು ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ