RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಎಸ್.ಎಫ್.ಸಿ ಅನುದಾನದಡಿ ಮಂಜೂರಾದ ರೂ.10 ಕೋಟಿಗಳ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಶಂಕು ಸ್ಥಾಪನೆ

ಗೋಕಾಕ:ಎಸ್.ಎಫ್.ಸಿ ಅನುದಾನದಡಿ ಮಂಜೂರಾದ ರೂ.10 ಕೋಟಿಗಳ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಶಂಕು ಸ್ಥಾಪನೆ 

ಎಸ್.ಎಫ್.ಸಿ ಅನುದಾನದಡಿ ಮಂಜೂರಾದ ರೂ.10 ಕೋಟಿಗಳ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಶಂಕು ಸ್ಥಾಪನೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 2 :

 
ತಾಲೂಕಿನ ಕೊಣ್ಣೂರ ಪುರಸಭೆಗೆ ಎಸ್.ಎಫ್.ಸಿ ವಿಶೇಷ ಅನುದಾನದಡಿ ಮಂಜೂರಾದ ರೂ 10 ಕೋಟಿ ಗಳ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮವು ಶನಿವಾರದಂದು ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜರುಗಿತ್ತು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮಾತನಾಡಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ಶ್ರಮಿಸುತ್ತಿದ್ದಾರೆ. ಇನ್ನೂ ಹಲವಾರು ಯೋಜನೆಗಳ ರೂಪರೇಷೆಗಳನ್ನು ಸಿದ್ದಪಡಿಸಲಾಗುತ್ತಿದ್ದು ಸರಕಾರದ ಮಂಜೂರಾತಿ ಪಡೆದು ಅವುಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗವುದು ಜನತೆ ಅಭಿವೃದ್ಧಿ ಕಾರ್ಯಗಳಿಗೆ ಸಂಘಟಿತರಾಗಿ ಸಹಕಾರ ನೀಡಬೇಕು ಈ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದ ಅವರು
ರಸ್ತೆ ಅಭಿವೃದ್ಧಿಗಾಗಿ ರೂ 6.40 ಕೋಟಿ, ಚರಂಡಿ ಕಾಮಗಾರಿಗಾಗಿ ರೂ 3.10 ,ಸ್ಮಶಾನ ಅಭಿವೃದ್ಧಿ ಹಾಗೂ ವಿದ್ಯುತಿಕರಣಕ್ಕೆ ರೂ 0.50 ಕೋಟಿ ರೂಗಳ ವೆಚ್ಚದಲ್ಲಿ ಗ್ರಾಮದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗವುದು ಎಂದರು .

ವೇದಿಕೆಯಲ್ಲಿ ಅಧ್ಯಕ್ಷೆ ರಜೀಯಾಬೇಗಂ ಹೊರಕೇರಿ, ಉಪಾಧ್ಯಕ್ಷ ಬೂತಪ್ಪ ಹುಕ್ಕೇರಿ, ಸ್ಥಾಯಿ ಸಮಿತಿ ಚೇರಮನ್ ಸಾವಂತ ತಳವಾರ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ, ಗೋಕಾಕ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪುರಸಭೆ , ಪುರಸಭೆ ಹಿರಿಯ ಸದಸ್ಯರಾದ ವಿನೋದ ಕರನಿಂಗ, ಪ್ರಕಾಶ ಕರನಿಂಗ, ಅಧಿಕಾರಿಗಳಾದ ವ್ಹಿ.ಎಂ ಸಾಲಿಮಠ, ಎಂ ಎಸ್.ತೇಲಿ, ಮುಖಂಡ ವಿರುಪಾಕ್ಷಪ್ಪ ಯಲಿಗಾರ ಇದ್ದರು.

Related posts: