ಗೋಕಾಕ:ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಮಂಜೂರಾದ ಬೀದಿ ದೀಪಗಳಿಗಳನ್ನು ಲೋಕಾರ್ಪಣೆ ಗೋಳಿಸಿದ ಸಚಿವ ರಮೇಶ
ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಮಂಜೂರಾದ ಬೀದಿ ದೀಪಗಳಿಗಳನ್ನು ಲೋಕಾರ್ಪಣೆ ಗೋಳಿಸಿದ ಸಚಿವ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3 :
ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಮಂಜೂರಾದ 480 ಲಕ್ಷ ರೂಗಳಲ್ಲಿ ನಗರದ ನಾಕಾ ನಂ 1 ರಿಂದ ಡಿ.ವಾಯ್.ಎಸ್.ಪಿ ಕಛೇರಿಯವರೆಗೆ ಮತ್ತು ಎ.ಪಿ.ಎಂ.ಸಿ ರಸ್ತೆ ವಿಭಜಕದ ಮಧ್ಯದಲ್ಲಿ ಅಳವಡಿಸಿದ ಬೀದಿ ದೀಪಗಳನ್ನು ಶನಿವಾರದಂದು ಸಾಯಂಕಾಲ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಅರೆನ್ನವರ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಎಇಇ ಕೆ.ಬಿ ಸಣ್ಣಕ್ಕಿ , ಎಸ್.ಬಿ ವರಾಳೆ, ನಗರಸಭೆ ಸದಸ್ಯರುಗಳಾದ ಅಬ್ಬಾಸದೇಸಾಯಿ, ಕುತಬುದ್ದೀನ ಗೋಕಾಕ, ಶ್ರೀಶೈಲ ಯಕ್ಕುಂಡಿ, ಪ್ರಕಾಶ ಮುರಾರಿ,ಸಂತೋಷ ಮಂತ್ರಣ್ಣವರ , ಸಿದ್ದಪ್ಪ ಹುಚ್ಚರಾಯಪ್ಪಗೋಳ, ಮುಖಂಡರುಗಳಾದ ಟಿ.ಆರ್.ಕಾಗಲ್ , ಎಂ.ಎಚ್.ಅತ್ತಾರ, ಅಬ್ಬುಲವಹಾಬ ಜಮಾದಾರ, ವಿಶ್ವನಾಥ್ ಬಿಳ್ಳೂರ, ಬಸವರಾಜ ದೇಶನೂರ, ದುರ್ಗಪ್ಪ ಶಾಸ್ತ್ರಿಗೋಲ್ಲರ, ಬಸವರಾಜ ಮಾಳಗಿ ಸೇರಿದಂತೆ ಅನೇಕರು ಇದ್ದರು.