ಗೋಕಾಕ:ಧೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸಚಿವ ರಮೇಶ ಅವರಿಗೆ ಸತ್ಕಾರ
ಧೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸಚಿವ ರಮೇಶ ಅವರಿಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 4 :
ತಾಲೂಕಿನ ಧೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಶಾಲೆಯ ಶಿಬ್ಬಂದಿ ವರ್ಗದವರು ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರು ಸೋಮವಾರದಂದು ಸಚಿವರ ಕಾರ್ಯಾಲಯದಲ್ಲಿ ಭೇಟಿಯಾಗಿ ಸತ್ಕರಿಸಿದರು
ಈ ಸಂದರ್ಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ರಮೇಶ ಕೋಲಕಾರ, ಎಸ್.ಡಿ. ಎಂ. ಸಿ ಅಧ್ಯಕ್ಷ ಮದರಾಸಾಬ ಜಗದಾಳ, ಶಾಲೆಯ ಮುಖ್ಯೋಪಾಧ್ಯಾಯ ಹೆಚ್ ಎ ಸಂಭೋಜಿ, ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು