ಗೋಕಾಕ:ಇಬ್ಬರು ಶಿಕ್ಷಕರಿಗೆ ಕೊರೋನಾ ಸೋಂಕು ದೃಢ : ಮುಂಜಾಗ್ರತಾ ಕ್ರಮವಾಗಿ 2 ಶಾಲೆಗಳು ಬಂದ್
ಇಬ್ಬರು ಶಿಕ್ಷಕರಿಗೆ ಕೊರೋನಾ ಸೋಂಕು ದೃಢ : ಮುಂಜಾಗ್ರತಾ ಕ್ರಮವಾಗಿ 2 ಶಾಲೆಗಳು ಬಂದ್
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 7 :
ಸರಕಾರ ಬರೋಬ್ಬರಿ 10 ತಿಂಗಳ ಬಳಿಕ ರಾಜ್ಯದಲ್ಲಿ ಶಾಲೆಗಳಿಗೆ ಮಕ್ಕಳ ಪ್ರವೇಶಕ್ಕೆ ಅನುಮತಿ ನೀಡಿದೆ ಆದರೆ ಕರದಂಟು ನಗರಿ ಗೋಕಾಕದಲ್ಲಿ ಕೊರೋನಾ ಆರ್ಭಟ ಹೆಚ್ಚುತ್ತಿದ್ದು, ಗುರುವಾರದಂದು ಗೋಕಾಕ ವಲಯದಲ್ಲಿ ಮತ್ತೆ ಇಬ್ಬರು ಶಿಕ್ಷಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ತಾಲೂಕಿನ ಕನಸಗೇರಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ , ಹಿರೇನಂದಿ ಪ್ರೌಢಶಾಲೆಯ ಶಿಕ್ಷಕ ವೋರ್ವನಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಇವೆರಡು ಶಾಲೆಗಳನ್ನು ಮೂರು ದಿನಗಳವರೆಗೆ ಬಂದ ಮಾಡಲಾಗಿದ್ದು, ಗ್ರಾಮ ಪಂಚಾಯಿತಿ ಸಹಾಯದಿಂದ ಇವೆರಡು ಶಾಲೆಗಳಲ್ಲಿ ಸೈನಿಟೈಜರ್ ಸಿಂಪಡಿಸಿ ಸೋಂಕು ಹರಡದಂತೆ ಕ್ರಮ ಕೈಗೋಳಲಾಗಿದೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನೀಕೇರಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಶಾಲೆ ಪ್ರಾರಂಭವಾಗದಾಗಿನಿಂದಲೂ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 25 ಶಿಕ್ಷಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಪಾಲಕರಲ್ಲಿ ಆತಂಕ ಮೂಡಿಸಿದೆ.