RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ವಿವಿಧ ಬೇಡಿಕೆಗಳಿಗೆ ಈಡೇರಿಸುವಂತೆ ಆಗ್ರಹಿಸಿ ಮನವಿ

ಗೋಕಾಕ:ವಿವಿಧ ಬೇಡಿಕೆಗಳಿಗೆ ಈಡೇರಿಸುವಂತೆ ಆಗ್ರಹಿಸಿ ಮನವಿ 

ವಿವಿಧ ಬೇಡಿಕೆಗಳಿಗೆ ಈಡೇರಿಸುವಂತೆ ಆಗ್ರಹಿಸಿ ಮನವಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 8 :

 
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಗೋಕಾಕ ತಾಲೂಕಾ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ ಮುಖಾಂತರ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ, ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಗೆ ಶುಕ್ರವಾರದಂದು ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯತಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ವೇತನ ಸಿಗದೇ ತುಂಬಾ ಸಂಕಷ್ಟದಲ್ಲಿದ್ದಾರೆ. ರಾಜ್ಯ 63 ಸಾವಿರ ನೌಕರರಿಗೂ ಪ್ರತಿ ತಿಂಗಳು ವೇತನ ಸಿಗುವಂತೆ ಕ್ರಮ ವಹಿಸಬೇಕು,ಗ್ರಾ.ಪಂ ನೌಕರರಿಗೆ ಪೆನಷೆನ್ ಸೌಲಭ್ಯ ಕಲ್ಪಿಸಬೇಕು. ಕಸ ಗೂಡಿಸುವ ಮತ್ತು ಸ್ವಚ್ಛತಾಗಾರರಿಗೆ 700 ಜನ ಸಂಖ್ಯೆಗೆ ಒಬ್ಬರಂತೆ ಅನುಮೋದನೆ ನೀಡಬೇಕು. ಬಾಕಿ ಉಳಿದಿರುವ ಎಲ್ಲಾ ನೌಕರರನ್ನು ಪಂಚತಂತ್ರದಲ್ಲಿ(ಇಎಫ್ ಎಂಎಸ್) ಅಳವಡಿಸಬೇಕು.ನೇಮಕಾತಿಗಳನ್ನು ಮುಂದಿನ ಆದೇಶದವರೆಗೂ ತಡೆ ಹಿಡಿಯಬೇಕೆಂದು ಹಣಕಾಸು ಇಲಾಖೆ ಮಾಡಿರುವ ಆದೇಶದ ಆಧಾರದಲ್ಲಿ ತಮ್ಮಿಂದಲೂ ಗ್ರೇಡ್-2 ಹುದ್ದೆಗೆ ಮತ್ತು ದ್ವಿ.ದ ಲೆಕ್ಕ ಸಹಾಯಕ ನೇಮಕಾತಿ ತಡೆ ಹಿಡಿಯಲಾಗಿದೆ.ತಮ್ಮ ಆದೇಶವನ್ನು ವಾಪಸ್ಸ್ ಪಡೆಯಲು ಕೋರಲಾಗಿದೆ. ಪಂಚಾಯತಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಗಳಿಗೂ ಅನುಮೋದನೆ ನೀಡಬೇಕು. ನಿವೃತ್ತಿ ಸೌಲಭ್ಯಕ್ಕಾಗಿ ಗ್ರ್ಯಾಚುಟಿ ಮೊತ್ತ ಸಿಗುವಂತೆ ಹಣಕಾಸಿನ ವ್ಯವಸ್ಥೆ ಮಾಡಬೇಕು.
ಸಿಐಟಿಯು: ರೈತ ಹಾಗೂ ಕಾರ್ಮಿಕ ವಿರೋಧಿ ಮಸೂದೆಗಳನ್ನು ವಾಪಸ್ಸ್ ಪಡೆಯಲು ಒತ್ತಾಯಿಸಿ ಹಾಗೂ ಎಲ್ಲಾ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು.ಮೂರು ಕೃಷಿ ಕಾನೂನುಗಳನ್ನು ವಾಪಸ್ಸ್ ಪಡೆಯಬೇಕು. ವಿದ್ಯುತ್ ಮಸೂದೆ-2020ನ್ನು ಹಿಂದಕ್ಕೆ ಪಡೆಯಬೇಕು. ಎಲ್ಲ ರೀತಿಯ ಖಾಸಗೀಕರಣ ಕೂಡಲೇ ನಿಲ್ಲಿಸಬೇಕು. ಬಡ ಕುಟುಂಬದ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 10 ಕೆಜಿ. ಆಹಾರ ಧ್ಯಾನಗಳನ್ನು ಉಚಿತವಾಗಿ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಾರ್ಷಿಕ 200 ದಿನಗಳ ಕೆಲಸ ಮತ್ತು ದಿನಕ್ಕೆ ರೂ.700 ವೇತನ ನೀಡಬೇಕು. ನಗರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು. ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಎಲ್ಲ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ರಕ್ಷಣಾ ಯೋಜನೆಯನ್ನು ವಿಸ್ತರಿಸಬೇಕು. ಉಚಿತ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಎಲ್ಲರಿಗೂ ಜಾರಿಗೊಳಿಸಬೇಕು. ಐಸಿಡಿಎಸ್ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು. ಎಲ್ ಕೆಜಿ, ಯುಕೆಜಿ ಅಂಗನವಾಡಿ ಕೇಂದ್ರಗಳಲ್ಲಿ ನಡೆಯಬೇಕು.ರೂ.21 ಸಾವಿರ ಕನಿಷ್ಠ ವೇತನ ಜಾರಿಯಾಗಬೇಕು. ಬಿಸಿಯೂಟ ಅಡುಗೆ ನೌಕರರನ್ನು ಖಾಯಂ ಮಾಡಬೇಕು. ಗುತ್ತಿಗೆ ಪದ್ದತಿ ನಿಲ್ಲಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಡ್ಡೆಪ್ಪ ಭಜಂತ್ರಿ, ರಮೇಶ ಹೋಳಿ, ಕಲ್ಲಪ್ಪ ಮಾದರ, ದೊಡ್ಡವ್ವ ಪೂಜೇರಿ, ಮುನಿರಾ ಮುಲ್ಲಾ, ಪಾರ್ವತಿ ಕೌಜಲಗಿ, ಮಾಸಾಬಿ ಡಾಲಾಯತ, ಬಸವರಾಜ ರೊಡ್ಡನವರ, ಯುವರಾಜ, ಆನಂದ ಅಂಗಡಿ ಸೇರಿದಂತೆ ಗ್ರಾಮ ಪಂಚಾಯತ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಉಪಸ್ಥಿತರಿದ್ದರು.

Related posts: