ಗೋಕಾಕ:ಶಿಕ್ಷಣ ನೀಡಿದವರ ಪೂಜೆ ಆಗಬೇಕಾದ ಈ ಕಾಲದಲ್ಲಿ ಶಿಕ್ಷಣ ನೀಡದವರ ಪೂಜೆ ಆಗುತ್ತಿದೆ : ಸತೀಶ ಜಾರಕಿಹೊಳಿ ವಿಷಾದ
ಶಿಕ್ಷಣ ನೀಡಿದವರ ಪೂಜೆ ಆಗಬೇಕಾದ ಈ ಕಾಲದಲ್ಲಿ ಶಿಕ್ಷಣ ನೀಡದವರ ಪೂಜೆ ಆಗುತ್ತಿದೆ : ಸತೀಶ ಜಾರಕಿಹೊಳಿ ವಿಷಾದ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 10 :
ಶಿಕ್ಷಣದ ಬಗ್ಗೆ ಅರಿವು ಮೂಡಿಸಿ , ಶಿಕ್ಷಣ ನೀಡಿದವರ ಪೂಜೆ ಆಗಬೇಕಾದ ಈ ಕಾಲದಲ್ಲಿ ಶಿಕ್ಷಣ ನೀಡದವರ ಪೂಜೆ ಆಗುತ್ತಿರುವುದು ವಿಷಾದನೀಯ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ , ಶಾಸಕ ಸತೀಶ ಜಾರಕಿಹೊಳಿ ಹೇಳಿದರು
ರವಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಹಿನ್ನೆಲೆ ಮಾನವ ಬಂಧುತ್ವ ವೇದಿಕೆ ಸಂಘಟನೆ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಿ, ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಹೆಲಿಕಾಪ್ಟರ್ ನಲ್ಲಿ ಸುತ್ತಾಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು
ಜನರಿಗೆ ಶಿಕ್ಷಣ ದೊರಕಿಸುವ ಮೂಲ ಉದ್ದೇಶದಿಂದ ತಮ್ಮ ಜೀವನವನ್ನೇ ಮೂಡಿಪಾಗಿಟ್ಟ ಅಕ್ಷರದ ಅವ್ವ ಸಾವತ್ರಿಬಾಯಿ ಪುಲೆ. ನಾರಾಯಣ ಗುರು, ಶಾಹುಮಹಾರಾಜ ರಂತಹ ಮಹಾನ ಪುರುಷರ ಪೂಜೆ ಆಗಬೇಕಾದ ಸಮಾಜದಲ್ಲಿ ಶಿಕ್ಷಣ ಕೊಡದೆ ಇದ್ದವರ ಪೂಜೆ ಆಗುತ್ತಿರುವುದು ನಮ್ಮ ದುರ್ದೈವವಾಗಿದೆ. ಇಂತಹ ಮಹಾನ ನಾಯಕರ ತ್ಯಾಗ ಹಾಗೂ ಪರಿಶ್ರಮವನ್ನು ಇಂದಿನ ಯುವ ಪಿಳಿಗೆಗೆ ತಿಳಿಸುವ ಮಹತ್ತರ ಉದ್ದೇಶದಿಂದ ಮಾನವ ಬಂದುತ್ವ ವೇದಿಕೆಯಿಂದ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದೆ.
ಸ್ವಾತಂತ್ರ ಹೋರಾಟಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಬಾಲಗಂಗಾಧರ ತಿಲಕ ಅವರು ಗಲ್ಲಿ ಗಲ್ಲಿಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿ ಹೋರಾಟಕ್ಕೆ ದುಮುಕಿಸಿದಂತೆ ನಾವು ಸಹ ವಿದ್ಯಾರ್ಥಿಗಳಲ್ಲಿ ಮಹಾನ ನಾಯಕರ ಕುರಿತು ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಸ್ವರ್ಧೆಗಳನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ವಿವಾರಕ್ಕೆ ಅವಕಾಶ ಕಲ್ಪಿಸಿದ್ದೇವೆ. ಈ ಪ್ರಯತ್ನ ದೇಶದಲ್ಲಿ ವಿನೂತನವಾಗಿದೆ. ದೇಶದ ಮಹಾನ ನಾಯಕರ ಜಯಂತಿಗಳನ್ನು ಮಾಡಿ ಯುವ ಪಿಳಿಗೆಗೆ ಜಾಗೃತಿ ಮಾಡುವ ಮೂಲ ಉದ್ದೇಶ ನಮ್ಮದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಸಾವಿತ್ರಿಬಾಯಿ ಪುಲೆ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಸತ್ಕರಿಸಿ ಗೌರವಿಸಲಾಯಿತು. ನಂತರ ಪ್ರಬಂಧ ಮತ್ತು ಭಾಷಣ ಸ್ವರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸತೀಶ ಜಾರಕಿಹೊಳಿ ಅವರ ಹೆಲಿಕಾಪ್ಟರ್ ನಲ್ಲಿ ಜಾಲಿ ಡ್ರೈವ್ ಮಾಡಿಸಲಾಯಿತು.
ವೇದಿಕೆಯಲ್ಲಿ ವಿನಿಯಾ ವಕ್ಕುಂದ, ವಾಯ್.ಬಿ ಹಿಮ್ಮಡಿ ಸೇರಿದಂತೆ ಇತರರು ಇದ್ದರು .