RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಸಹಕರಿಸಿ : ಸುರೇಶ ಸನದಿ

ಗೋಕಾಕ:ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಸಹಕರಿಸಿ : ಸುರೇಶ ಸನದಿ 

ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಸಹಕರಿಸಿ : ಸುರೇಶ ಸನದಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜ 10 :

 
ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಸಹಕರಿಸಬೇಕು ಎಂದು ಯುವ ಮುಖಂಡ ಸುರೇಶ ಸನದಿ ಹೇಳಿದರು.
ಅವರು ಶನಿವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಹನುಮಾನ ದೇವರ ಕಾರ್ತೀಕೋತ್ಸವ ಹಾಗೂ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರುಗಳಿಗೆ ಸತ್ಕಾರ ಸಮಾರಂಭ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯತಿಗೆ ಬಿಡುಗಡೆಗೊಂಡ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಮಾದರಿ ಗ್ರಾಮವನ್ನಾಗಿಸಲು ಎಲ್ಲರೂ ಸಹಕಾರ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದರಲ್ಲದೇ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳು ಅಭಿವೃದ್ದಿಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರವಚನಕಾರ ದಯಾನಂದ ಬೆಳಗಾವಿ ಮಾತನಾಡಿ ಹನುಮ ಮಾಲಾಧಾರಿಗಳು ತಮ್ಮ ಧಾರ್ಮಿಕ ಕಾರ್ಯವನ್ನು ಜಾತ್ಯಾತೀತವಾಗಿ ಮತ್ತು ನಿಸ್ವಾರ್ಥ ಮತ್ತು ನಿರಂತರ ಕಾಯಕ ಮಾಡುತ್ತಾ ಬಂದಿದ್ದು ಜ್ಞಾನ ಮತ್ತು ಮುಕ್ತಿ ಪಡೆಯಬೇಕಾದರೆ ಗುರು ಮುಖ್ಯವಾಗಿದ್ದಾನೆ. ವ್ಯಕ್ತಿ,ಮುಕ್ತಿ ಪಡೆಯಬೇಕಾದರೆ ಜ್ಞಾನಬೇಕು. ಅಧ್ಯಾತ್ಮಿಕವಾಗಿ ಸಾಧನೆ ಮಾಡಬೇಕಾದರೂ ಸಹ ಜ್ಞಾನ ಅತ್ಯಂತ ಅವಶ್ಯವಾಗಿದೆ. ಶ್ರೀ ಹನುಮಾನ ದೇವಸ್ಥಾನದಲ್ಲಿ ಕಳೆದ 11ದಿನಗಳಿಂದ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನು ನೀಡಿ ಭಕ್ತರ ಹಾಗೂ ಜನರ ಮನಸ್ಸುಗಳಿಸಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಶ್ರೇಷ್ಠ ಸಂತರು, ಮಹಾತ್ಮರು, ಅನುಭಾವಿಗಳು ಆಗಮಿಸಿದ್ದು ಅವರ ದರ್ಶನ ಪಡೆದು ಅವರ ಮಾತುಗಳನ್ನು ಕೇಳುವುದೇ ಪುಣ್ಯ ಎಂದರು.
ದಿವ್ಯ ಸಾನಿಧ್ಯವನ್ನು ಶ್ರೀ ವಿಠ್ಠಲ ದೇವರ ದೇವಋಷಿಗಳಾದ ಮುರೇಪ್ಪ ಪೂಜೇರಿ, ಸಾನಿಧ್ಯವನ್ನು ಶ್ರೀ ಬಸವೇಶ್ವರ ದೇವರ ದೇವಋಷಿಗಳಾದ ಬಸವರಾಜ ಕಬ್ಬೂರ, ಪಿಎಸ್‍ಐ ಆರ್.ಎಸ್. ಖೋತ, ನಿಂಗಪ್ಪ ಬಂಬಲಾಡಿ, ಹಾಲಪ್ಪ ಕರಿಗಾರ, ಬಡಪ್ಪ ಬಂಡಿವಡ್ಡರ, ನಾಗಪ್ಪ ವಾಸೇದಾರ ಮಹಾಂತೇಶ ಬೆಳಗಲಿ, ನೂತನ ಗ್ರಾ.ಪಂ ಸದಸ್ಯರುಗಳು ವೇದಿಕೆ ಮೇಲೆ ಇದ್ದರು.

Related posts: