RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸಮಾಜ ಭಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಮೂಡನಂಬಿಕೆಯಿಂದ ಹೊರಬರಬೇಕು : ಕಲ್ಪನಾ ಜೋಶಿ

ಗೋಕಾಕ:ಸಮಾಜ ಭಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಮೂಡನಂಬಿಕೆಯಿಂದ ಹೊರಬರಬೇಕು : ಕಲ್ಪನಾ ಜೋಶಿ 

ಸಮಾಜ ಭಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಮೂಡನಂಬಿಕೆಯಿಂದ ಹೊರಬರಬೇಕು : ಕಲ್ಪನಾ ಜೋಶಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 13 :

 

ಸಮಾಜ ಭಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಮೂಡನಂಬಿಕೆಯಿಂದ ಹೊರಬಂದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಅಲೆಮಾರಿ, ಅರೆಅಲೆಮಾರಿ ಜನಾಂಗದ ಜಿಲ್ಲಾ ಖಜಾಂಚಿ ಕಲ್ಪನಾ ಜೋಶಿ ಹೇಳಿದರು

ಬುಧವಾರದಂದು ನಗರದ ಆಶ್ರಯ ಬಡಾವಣೆಯ ವಸತಿ ನಿಲಯದ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರಿಗೆ ಸರಕಾರದ ಸೌಲಭ್ಯಗಳ ಮಾಹಿತಿ ಹಾಗೂ ಸಮುದಾಯದಲ್ಲಿರುವ ಮೂಢನಂಬಿಕೆ ಹೋಗಲಾಡಿಸಲು ಹಮ್ಮಿಕೊಂಡ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು

ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಸಮಾಜ ಹಿಂದುಳಿದಿರುವುದು ವಿಷಾದನೀಯ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ ಸಮಾಜ ಭಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೋಳಿಸಿ ಸರಕಾರ ಸಮುದಾಯದ ಅಭಿವೃದ್ಧಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದು, ಅವುಗಳ ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.

ಆರ್.ಎಲ್‌.ಮಿರ್ಚಿ ಮೂಢನಂಬಿಕೆ ಕುರಿತು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ಅಧಿಕಾರಿ ಆರ್‌.ಕೆ ಬಿಸಿರೊಟ್ಟಿ, ವಿಸ್ತರಣಾಧಿಕಾರಿ ಪಿ.ಆರ್.ಬೆವಿನಗಿಡದ, ಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ ಅಮೃತ ದಪ್ಪಿನವರ , ಪದಾಧಿಕಾರಿಗಳಾದ ರಾಜಶೇಖರ ವಾಕೂಡೆ, ಸಿದ್ದಪ್ಪ ಇಗವೆ, ಮಂಜುನಾಥ್ ಹೆಳವರ, ನಗರಸಭಾ ಸದಸ್ಯೆ ವೆಂಕವ್ವ ಶಾಸ್ತ್ರೀಗೋಲ್ಲರ ಇದ್ದರು.

ಬಿ.ಎ ಮಾಲದಿನ್ನಿ ಸ್ವಾಗತಿಸಿ , ವಂದಿಸಿದರು

Related posts: