RNI NO. KARKAN/2006/27779|Thursday, December 12, 2024
You are here: Home » breaking news » ಮೂಡಲಗಿ : ಸರ್ಕಾರದ ನಿರ್ಧಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ : ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಿ ಸ್ವಷ್ಟನೆ ನೀಡಿದ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಸರ್ಕಾರದ ನಿರ್ಧಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ : ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಿ ಸ್ವಷ್ಟನೆ ನೀಡಿದ ಬಾಲಚಂದ್ರ ಜಾರಕಿಹೊಳಿ 

ಸರ್ಕಾರದ ನಿರ್ಧಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ : ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಿ ಸ್ವಷ್ಟನೆ ನೀಡಿದ ಬಾಲಚಂದ್ರ ಜಾರಕಿಹೊಳಿ 

 

ಮೂಡಲಗಿ ಸೆ 8: ಯಾವ ಕಾರಣಗಳಿಂದಾಗಿ ಮೂಡಲಗಿ ತಾಲೂಕು ಆದೇಶ ಸರ್ಕಾರ ಕೈ ಬಿಟ್ಟಿದೆ ಎನ್ನುವುದು ನನ ಗಮನಕ್ಕೆ ಬಂದಿಲ್ಲ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಜನೇವರಿ ಒಳಗಾಗಿ ನೂತನ ತಾಲೂಕು ಮಾಡುವ ನೀಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.
ಹೊಸ ತಾಲೂಕುಗಳ ರಚನೆಯ ಅಧಿಸೂಚನೆಯಲ್ಲಿ ಮೂಡಲಗಿ ಹೊಸ ತಾಲೂಕು ಸರ್ಕಾರ ಕೈಬಿಟ್ಟಿರುವ ಕ್ರಮದಲ್ಲಿ ಯಾವುದೇ ರಾಜಕೀಯ ಒತ್ತಡವಾಗಲಿ ಮತ್ತು ನನ್ನ ಹಸ್ತ ಕ್ಷೇಪವಾಗಲಿ ಮಾಡಿಲ್ಲ. 25 ಹಳ್ಳಿಗಳ ಇದಕ್ಕೆ ಪ್ರತಿರೋಧ ಒಡ್ಡಿರುವುದರಿಂದ ಸರ್ಕಾರ ಮೂಡಲಗಿ ಹೊಸ ತಾಲೂಕು ರಚನೆ ಪ್ರಸ್ತಾಪ ಕೈ ಬಿಟ್ಟಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಪ್ರತಿಭಟನಾ ನಿರತರೊಂದಿಗೆ ಶಾಸಕ ಬಾಲಚಂದ್ರ

ರಾಜ್ಯ ಸರ್ಕಾರ ತಾಲೂಕಾ ರಚನೆಯಲ್ಲಿ ಮೂಡಲಗಿ ಹೊಸ ತಾಲೂಕವನ್ನು ಕೈ ಬಿಟ್ಟಿರುವ ಹಿನ್ನಲೆಯಲ್ಲಿ ಶುಕ್ರವಾರ   ಪಟ್ಟಣದಲ್ಲಿ ನಿಯೋಜಿತ ಮೂಡಲಗಿ ತಾಲೂಕಾ ರಚನಾ ಚಾಲನಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನಾನಿರತರನ್ನು ಉದ್ದೇಶಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮಾತನಾಡಿ, ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಮೂಡಲಗಿ ತಾಲೂಕಾ ರಚನೆಯನ್ನು ಸರ್ಕಾರ ಕೈ ಬಿಟ್ಟಿದ್ದರ ನಿರ್ಧಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ನಿಮ್ಮೇಲ್ಲರ ಸಹಕಾರದಿಂದ ಒಂದು ತಿಂಗಳ ಒಳಗಾಗಿ ಮೂಡಲಗಿ ಹೊಸ ತಾಲೂಕು ರಚನೆ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಮೂಡಲಗಿ ಹೊಸ ತಾಲೂಕಾ ರಚನೆಯ ಪ್ರಸ್ತಾಪಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು ಅಲ್ಲದೇ ಈ ತಾಲೂಕು ರಚನೆಗೆ ಪ್ರತಿರೋಧ ಒಡ್ಡಿರುವ ಎಲ್ಲ 25 ಗ್ರಾಮಗಳ ಮುಖಂಡರನ್ನು ವಿಶ್ವಾಸಕ್ಕೆ ತಗೆದುಕೊಂಡು ಮೂಡಲಗಿ ಹೊಸ ತಾಲೂಕು ರಚನೆಗೆ ಶ್ರಮಿಸುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ಭೀಕರ ಬರಗಾಲ ಇರುವುದರಿಂದ ಅನಾವಶ್ಯಕ  ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದರಿಂದ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ತೊಂದರೆ ಉಂಟಾಗುತ್ತದೆ ಹಾಗಾಗಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಗೆ ಸಹಕಾರ ನೀಡಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು .

ಪ್ರತಿಭಟನೆ ಕೈಬಿಡಲು ಒಪ್ಪದ ಸಾರ್ವಜನಿಕರು ನಾಳೆಯಿಂದ ಶಾಂತಿಯುತ ಪ್ರತಿಭಟನೆಗೆ ಸಜ್ಜಾಗಿದ್ದಾರೆಂದು ತಿಳಿದು ಬಂದಿದೆ

Related posts: