RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಮಾರ್ಚ 1 ರಿಂದ 3 ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ : ಈರಣ್ಣಾ ಕಡಾಡಿ ಮಾಹಿತಿ

ಗೋಕಾಕ:ಮಾರ್ಚ 1 ರಿಂದ 3 ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ : ಈರಣ್ಣಾ ಕಡಾಡಿ ಮಾಹಿತಿ 

ಮಾರ್ಚ 1 ರಿಂದ 3 ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ : ಈರಣ್ಣಾ ಕಡಾಡಿ ಮಾಹಿತಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 22 :

 

ನಗರದ ಅಲ್ಲಮಪ್ರಭು ಪೀಠ ಪರಂಪರೆಯ ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಲಿಂ. ಶ್ರೀ ಬಸವಮಹಾಸ್ವಾಮಿಗಳವರ ಪುಣ್ಯ ಸ್ಮರಣೋತ್ಸವದ ನಿಮಿತ್ತವಾಗಿ 16ನೇ ಶರಣ ಸಂಸ್ಕೃತಿ ಉತ್ಸವವನ್ನು ಮಾರ್ಚ 1,2,3 ರಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ತಿಳಿಸಿದರು.

ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ 6 ಘಂಟೆಯಿಂದ ನಾಡಿನ ಪೂಜ್ಯರು , ಸಚಿವರು , ಕಲಾವಿದರು, ಸಾಹಿತಿ ಚಿಂತಕರಿಂದ ವಿವಿಧ ಗೋಷ್ಠಿಗಳು ಹಾಗೂ ವೈವಿದ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ದಿ. 1 ರಂದು ನಡೆಯುವ ಯುವ ಸಮಾವೇಶದಲ್ಲಿ ಐಪಿಎಸ್ ಅಧಿಕಾರಿ ರವಿ ಚನನ್ನವರ , ದಿ.2 ರಂದು ನಡೆಯುವ ಕಾಯಕಶ್ರೀ ಪ್ರಧಾನ ಸಮಾರಂಭದಲ್ಲಿ ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರುಜಿ ಅವರಿಗೆ ಕಾಯಕಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ದಿ.3 ರಂದು ನಡೆಯುವ ಮಹಿಳಾ ಸಮಾವೇಶದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಡಿ.ರೂಪಾ ಪಾಲ್ಗೋಳಲಿದ್ದಾರೆ. ದಿ.4 ರಂದು ಶ್ರೀಮಠದಲ್ಲಿ ದಾರ್ಮಿಕ ವಿಧಿವಿಧಾನಗಳು ಜರಗಲಿದ್ದು, ತಾಲೂಕಿನ ಸಮಸ್ತ ನಾಗರಿಕ ಬಂಧುಗಳು ಭಕ್ತಾದಿಗಳು ತಮ್ಮ ತನು, ಮನ ಧನ ಸೇವೆ ಸಲ್ಲಿಸುವ ಮೂಲಕ ಉತ್ಸವದಲ್ಲಿ ಪಾಲ್ಗೊಂಡು ಶ್ರೀಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಸಮಿತಿಯ ಕಾರ್ಯದರ್ಶಿ ವಿವೇಕ ಜತ್ತಿ ಇದ್ದರು.

Related posts: