RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ದೋಬಿ ವೃತ್ತಿಮಾಡುವ ಮುಸ್ಲಿಂ ಸಮುದಾಯಕ್ಕೆ ಸರಕಾರ 2 ಎ ಜಾತಿ ಪ್ರಮಾಣಪತ್ರ ನೀಡಲು ಆಗ್ರಹಿಸಿ ಮನವಿ

ಗೋಕಾಕ:ದೋಬಿ ವೃತ್ತಿಮಾಡುವ ಮುಸ್ಲಿಂ ಸಮುದಾಯಕ್ಕೆ ಸರಕಾರ 2 ಎ ಜಾತಿ ಪ್ರಮಾಣಪತ್ರ ನೀಡಲು ಆಗ್ರಹಿಸಿ ಮನವಿ 

ದೋಬಿ ವೃತ್ತಿಮಾಡುವ ಮುಸ್ಲಿಂ ಸಮುದಾಯಕ್ಕೆ ಸರಕಾರ 2 ಎ ಜಾತಿ ಪ್ರಮಾಣಪತ್ರ ನೀಡಲು ಆಗ್ರಹಿಸಿ ಮನವಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 22 : 

ದೋಬಿ ವೃತ್ತಿಮಾಡುವ ಮುಸ್ಲಿಂ ಸಮುದಾಯಕ್ಕೆ ಸರಕಾರ 2 ಎ ಜಾತಿ ಪ್ರಮಾಣಪತ್ರ ನೀಡುವಂತೆ ಆದೇಶಿಸಿರುವುದನ್ನು ಜಾರಿಗೆ ತರುವಂತೆ ಆಗ್ರಹಿಸಿ ಇಲ್ಲಿಯ ನ್ಯೂ ಸ್ಟಾರ ಅಲ್ಪಸಂಖ್ಯಾತ ಅಗಸರ ಕ್ಷೇಮಾಭಿವೃದ್ಧಿ ಸಂಘದವರು ಶುಕ್ರವಾರದಂದು ನಗರದ  ಮಿನಿವಿಧಾನಸೌಧದಲ್ಲಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಗೋಕಾಕ ತಾಲೂಕಿನಲ್ಲಿ 300 ರಿಂದ 400 ದೋಬಿ ವೃತ್ತಿಮಾಡುವ ಮುಸ್ಲಿಂ ಜನಾಂಗದವರು ವಾಸಿಸುತ್ತಿದ್ದಾರೆ. ಸರಕಾರ ಈ ಸಮುದಾಯಕ್ಕೆ  2007/08 ರಲ್ಲಿ 2 ಎ ಮಿಸಲಾತಿ ಕಲ್ಪಿಸಿ ಆದೇಶ ಹೋರಡಿಸಿರುತ್ತದೆ. ಮಾನ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡುವಾಗ 2 ಎ ವರ್ಗದ ಜಾತಿ ಪ್ರಮಾಣಪತ್ರ ನೀಡುವಂತೆ ಜಾರಿಗೆ ತರುವಂತೆ ಸೂಚಿಸಬೇಕು ಹಾಗೂ ಶಾಲಾ ದಾಖಲಾತಿಗಳಲ್ಲಿ ಮಕ್ಕಳ ತಿದ್ದುಪಡಿ ಮಾಡಿಕೊಳ್ಳುವ ಹಾಗೆ ಶೈಕ್ಷಣಿಕ ಅಧಿಕಾರಿಗಳಿಗೆ ಮಾಹಿತಿಗಳನ್ನು ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹರಿಸುವಂತೆ ಮನವಿಯಲ್ಲಿ ಕೋರಿದ್ದಾರೆ. 

ಈ ಸಂದರ್ಭದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಹಸನಸಾಬ ಪಾಕಜಾದೆ, ಕಾರ್ಯದರ್ಶಿ ಅಮಿನ ಪಟೇಲ್ , ಪದಾಧಿಕಾರಿಗಳಾದ ಮಹ್ಮದ ರಪೀಕ ಪಾಕಿಜಾ, ಮನಸೂರಸಾಬ ಅಗಸರ , ತಾಜುದ್ದೀನ ಅಗಸರ , ಮಹೆಬೂಬಾ ಅಗಸರ, ದಸ್ತಗಿರಿಸಾಬ ಪರೀಠ, ಖಾಸಿಮಸಾಬ ಅಗಸರ, ಜಯಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲಿಕಜಾನ ತಲವಾರ, ತಾಲೂಕಾಧ್ಯಕ್ಷ ಹೈದರಾಲಿ ಮುಲ್ಲಾ , ಪದಾಧಿಕಾರಿಗಳಾದ ಅಜೀಜ ಮೋಕಾಶಿ, ಹಮೀದ ಗುಡವಾಲೆ , ಮೋಸಿನ ಪೈಲವಾನ ಸೇರಿದಂತೆ ಇತರರು ಇದ್ದರು.

Related posts: