RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಕಲ್ಲೋಳಿ.ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಕಲ್ಲೋಳಿ ನಾಗರಿಕರಿಂದ ಶಾಸಕರಿಗೆ ಮನವಿ

ಘಟಪ್ರಭಾ:ಕಲ್ಲೋಳಿ.ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಕಲ್ಲೋಳಿ ನಾಗರಿಕರಿಂದ ಶಾಸಕರಿಗೆ ಮನವಿ 

ಕಲ್ಲೋಳಿ ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಕಲ್ಲೋಳಿ ನಾಗರಿಕರಿಂದ ಶಾಸಕರಿಗೆ ಮನವಿ

ಘಟಪ್ರಭಾ ಸೆ 8: ಗೋಕಾಕ ತಾಲೂಕಿನ ಕಲ್ಲೋಳಿ ಪಟ್ಟಣವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಆಗ್ರಹಿಸಿ ಕಲ್ಲೋಳಿಯಲ್ಲಿ ಶುಕ್ರವಾರದಂದು ನಾಗರಿಕರು ಪ್ರತಿಭಟನೆ ನಡೆಸಿದರು.

ಕಲ್ಲೋಳಿ ಪಟ್ಟಣವನ್ನು ನಿಯೋಜಿತ ಮೂಡಲಗಿ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ನಮಗೆ ತೊಂದರೆ ಆಗುತ್ತದೆ. ನಮ್ಮೆಲ್ಲ ಕೆಲಸ ಕಾರ್ಯಗಳು ಹಾಗೂ ಕೇವಲ 11 ಕಿ.ಮೀ ದೂರದಲ್ಲಿರುವ ಗೋಕಾಕ ಅತ್ಯಂತ ಯೋಗ್ಯವಾಗಿದೆ ಮೂಡಲಗಿಗೆ ನಾವು ಹೋಗುವುದಿಲ್ಲ. ನಮ್ಮನ್ನು ಯಾವುದೇ ಕಾರಣಕ್ಕೂ ಮೂಡಲಗಿಗೆ ಸೇರಿಸಬೇಡಿ. ನಮಗೆ ಗೋಕಾಕ ತಾಲೂಕಿನಲ್ಲಿ ಮುಂದುವರೆಯಲ್ಲಿಕ್ಕೆ ಅವಕಾಶ ಮಾಡಿಕೊಡಿ ಎಂದು ಪ್ರತಿಭಟನಾಕಾರರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಲ್ಲೋಳಿ ಪಟ್ಟಣದ ನಾಗರಿಕರ ಬೇಡಿಕೆಯನ್ನು ಸಹಾನುಭೂತಿಯಿಂದ ಸ್ವೀಕರಿಸಿದರು. ನಾಗರಿಕರ ಬೇಡಿಕೆಯನ್ನು ಮುಖಂಡರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಮೂಡಲಗಿಯನ್ನು ತಾಲೂಕಾ ಕೇಂದ್ರವನ್ನಾಗಿ ರೂಪಿಸಲು ಎಲ್ಲ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು. ಕಲ್ಲೋಳಿ ಪಟ್ಟಣವನ್ನು ಗೋಕಾಕ ತಾಲೂಕಿಗೆ ಸೇರ್ಪಡೆಗೊಳಿಸಲು ಪ್ರಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆ ನಡೆಸಿದರು ಟೈಯರಿಗೆ ಬೆಂಕಿ ಹೆಚ್ಚಿ ತಮ್ಮ ಆಕ್ರೋಸವನ್ನು ವ್ಯಕ್ತಪಡಿಸಿದರು. ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ವ್ಯಾಪಾರ ವಹಿವಾಟುಗಳು ಕೆಲಕಾಲ ಬಂದ ಆಗಿದ್ದವು.
ಪ್ರತಿಭಟನೆಯಲ್ಲಿ ಯುವ ಧುರೀಣ ಸುಭಾಸ ಕುರಬೇಟ, ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ರಾವಸಾಹೇಬ ಬೆಳಕೂಡ, ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಪ್ರಭಾ ಶುಗರ ನಿರ್ದೇಶಕ ಮಹಾಂತೇಶ ಕಪ್ಪಲಗುದ್ದಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ಬಸವಂತ ದಾಸನವರ, ಬಸಪ್ಪ ಯಾದಗುಡ, ಬಸು ಸೊಂಟನವರ, ಭಗವಂತ ಪತ್ತಾರ, ಗೋರೋಶಿ ಮುಂತಾದವರು ಪಾಲ್ಗೊಂಡಿದ್ದರು.

Related posts: