RNI NO. KARKAN/2006/27779|Sunday, October 20, 2024
You are here: Home » breaking news » ಗೋಕಾಕ:ಕ್ಯಾನ್ಸರ್ ರೋಗಕ್ಕೆ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಗುಣುಪಡಿಸಬಹುದು : ಡಾ. ಸಿದ್ದಣ ಕಮತ

ಗೋಕಾಕ:ಕ್ಯಾನ್ಸರ್ ರೋಗಕ್ಕೆ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಗುಣುಪಡಿಸಬಹುದು : ಡಾ. ಸಿದ್ದಣ ಕಮತ 

ಕ್ಯಾನ್ಸರ್ ರೋಗಕ್ಕೆ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಗುಣುಪಡಿಸಬಹುದು : ಡಾ. ಸಿದ್ದಣ ಕಮತ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 23 :

 

ಕ್ಯಾನ್ಸರ್ ರೋಗಕ್ಕೆ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಗುಣುಪಡಿಸಬಹುದು ಎಂದು ಡಾ. ಸಿದ್ದಣ ಕಮತ ಹೇಳಿದರು.

ಶನಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ರೋಟರಿ ಜಿಲ್ಲೆ 3170 ಈ ಸಾಲಿನ ಯೋಜನೆಗಳಲ್ಲಿ ಒಂದಾದ ಕ್ಯಾನ್ಸರ್ ತಪಾಸಣೆ ಯೋಜನೆ ಅಡಿಯಲ್ಲಿ ಇಲ್ಲಿನ ರೋಟರಿ ಮತ್ತು ಇನರವ್ಹೀಲ್ ಸಂಸ್ಥೆಗಳ ಆಶ್ರಯದಲ್ಲಿ 45 ವರ್ಷ ಮೇಲ್ಪಟ್ಟ ಮಹಿಳೆಯರ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕ್ಯಾನ್ಸರ್ ತಪಾಸಣೆ ಮಾಡಿಸುವುದರಿಂದ ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದರೆ ರೋಗ ಗುಣಪಡಿಸಬಹುದಾಗಿದೆ. ಇಂತಹ ಶಿಬಿರಗಳಿಂದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ ಈ ರೋಗದಿಂದ ಮುಕ್ತರನ್ನಾಗಿಸಲು ಸಹಕಾರಿಯಾಗುತ್ತದೆ.
ಈ ಶಿಬಿರದಲ್ಲಿ ಬಾಯಿ , ಸ್ತನ , ಸರ್ವೈಕಲ್ ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಗಣೇಶ ವರದಾಯಿ, ಇನರವ್ಹೀಲ್ ಸಂಸ್ಥೆಯ ಅಧ್ಯಕ್ಷೆ ರೂಪಾ ಮುನವಳ್ಳಿ, ಕಾರ್ಯದರ್ಶಿ ಜ್ಯೋತಿ ವರದಾಯಿ, ಸೋಮಶೇಖರ್ ಮಗದುಮ್ಮ, ರಾಜಶೇಖರ ಮುನ್ನೋಳಿಮಠ, ಜಗದೀಶ್ ಚುನಮರಿ, ಅನುಸೂಯಾ ದೂಳಾಯಿ , ಜಯಾ ಕಮತ, ಕೋಲ್ಹಾಪೂರ ಕ್ಯಾನ್ಸರ್ ಸೆಂಟರನ ಡಾ.ಅರ್ಜುನ ಶಿಂದೆ , ಡಾ.ಮಾಧುರಿ ಇದ್ದರು.

Related posts: