ಘಟಪ್ರಭಾ:ವಿವಿಧ ಅಭಿವೃದ್ಧಿ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಚಾಲನೆ
ವಿವಿಧ ಅಭಿವೃದ್ಧಿ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜ 23 :
2020-21 ಸಾಲಿನ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ 15ನೇ ಹಣಕಾಸು ಯೋಜನೆಯಲ್ಲಿ ಮುಸ್ಲೀಂ ಸ್ಮಶಾನ ಭೂಮಿಯಲ್ಲಿ ವಿದ್ಯುತ ಕಂಬಗಳನ್ನು ಅಳವಡಿಸುವ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಶನಿವಾರದಂದು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ರಮೇಶ ಜಾರಕಿಹೊಳಿಯವರು ತಮ್ಮ ಕ್ಷೇತ್ರದ ಪ್ರತಿವೊಂದು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ಸಮಾಜಗಳ ಸ್ಮಶಾನಗಳು ಸೇರಿದಂತೆ ಎಲ್ಲ ವಾರ್ಡಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಫ್.ಸಿ ಮುಕ್ತ ನಿಧಿ ಹಾಗೂ ಎಸ.ಎಫ.ಸಿ ಕುಡಿಯುವ ನೀರು ಅನುದಾನದಡಿ ವಿವಿಧ ಕಾಮಗಾರಿ ಹಾಗೂ ಈದ್ಗಾ ಮೈದಾನದಲ್ಲಿ ಶೇಡ್ಡ್ ಹಾಗೂ ಇನ್ನೀತರ ಅಭಿವೃಧ್ಧಿ ಕಾಮಗಾರಿಗಳಿಗೆ ಗಣ್ಯರಿಂದ ಅಡಿಗಲ್ಲಿ ನೆರವೇರಿಸಲಾಯಿತು.
ಪಟ್ಟಣದ ಮುಸ್ಲಿಂ ಸಮಾಜ ಹಾಗೂ ಖಬರಸ್ತಾನ ಕಮೀಟಿಯಿಂದ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಹಾಗೂ ಹಿರಿಯರಾದ ಡಿ.ಎಂ.ದಳವಾಯಿ, ಪ.ಪಂ ಮುಖ್ಯಾಧಿಕಾರಿ ಕೆ.ಭೀ.ಪಾಟೀಲ, ಅಭಿಯಂತರಾದ ಎಂ.ಎಸ್.ತೇಲಿ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಮ್.ದಳವಾಯಿ, ಮತ್ವಲ್ಲಿ ನೂರುದ್ದಿನ ಪೀರಜಾದೆ, ಸುರೇಶ ಕಾಡದವರ, ಮಡಿವಾಳಪ್ಪ ಮುಚಳಂಬಿ, ರಮೇಶ ತುಕ್ಕಾನಟ್ಟಿ, ಸುರೇಶ ಪಾಟೀಲ, ಗಂಗಾದರ ಬಡಕುಂದ್ರಿ, ಪರಶರಾಮ ಕಲಕುಟಗಿ, ಈಶ್ವರ ಮಟಗಾರ, ಕೆಂಪಣ್ಣಾ ಚೌಕಶಿ, ಸುಧೀರ ಜೋಡಟ್ಟಿ, ಮುಸ್ಲಿಂ ಸಮಾಜದ ಹಿರಿಯರಾದ ಯೂನೂಸ ಶೇಖ, ಮುಸ್ತಾಕ ಖಾಜಿ, ಅಹ್ಮದಹುಸೇನ ಬಾಗವಾನ, ಗೌಸ ಬಾಗವಾನ, ಪ.ಪಂ ಉಪಾಧ್ಯಕ್ಷ ಈರಣ್ಣಾ ಕಲಕುಟಗಿ, ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಮಲ್ಲು ಕೋಳಿ, ಪ್ರವೀಣ ಮಟಗಾರ, ಮಾರುತಿ ಹುಕ್ಕೇರಿ, ಶೇಖರ ಕುಲಗೂಡ, ಸುರೇಶ ಪೂಜೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಇಮಾಮಹುಸೇನ ಮುಲ್ಲಾ, ಶೌಕತ ಕಬ್ಬೂರ, ಉಸ್ಮಾನ ನಾಶಿಪುಡಿ, ಇಸ್ಮಾಯಿಲ ಕಬ್ಬೂರ, ದಾದಾಫೀರ ಶಾಭಾಜಖಾನ, ತೌಸೀಫ ಅತ್ತಾರ, ಮೋದಿನಸಾಬ ಕಬ್ಬೂರ, ಅಲ್ತಾಫ ಉಸ್ತಾದ, ಜಾಕೀರ ಬಾಡಕರ, ಶಾಹೀದ ಹುದಲಿ, ಶಬ್ಬೀರ ಜಮಖಂಡಿ, ದಿಲಾವರ ನಧಾಪ, ದಸ್ತಗೀರ ಪೀರಜಾದೆ, ಇಕಬಾಲ ಮೋಕಾಶಿ, ಜೈಲಾನಿ ಮಕಾನದಾರ, ರಜಾಕ ಚೌಧರಿ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ಜಿ.ಎಸ್.ರಜಪೂತ ಸ್ವಾಗತಿಸಿದರು. ದಿಲಾವರ ಬಾಳೇಕುಂದ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.