ಮೂಡಲಗಿ:ಎನ್.ಟಿ.ಎಸ್.ಇ ಪರೀಕ್ಷೆಗೆ 1882, ಎನ್.ಎಮ್.ಎಮ್. ಎಸ್ ಪರೀಕ್ಷೆಗೆ 2163 ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆ : ಬಿಇಒ ಮನ್ನೀಕೇರಿ
ಎನ್.ಟಿ.ಎಸ್.ಇ ಪರೀಕ್ಷೆಗೆ 1882, ಎನ್.ಎಮ್.ಎಮ್. ಎಸ್ ಪರೀಕ್ಷೆಗೆ 2163 ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆ : ಬಿಇಒ ಮನ್ನೀಕೇರಿ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಜ 23 :
ಪ್ರಸಕ್ತ 2020-21 ನೇ ಸಾಲಿನ ಎನ್.ಟಿ.ಎಸ್.ಇ ಪರೀಕ್ಷೆಗೆ 1882 ವಿದ್ಯಾರ್ಥಿಗಳು, ಎನ್.ಎಮ್.ಎಮ್.ಎಸ್ ಪರೀಕ್ಷೆಗೆ 2163 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಮೂಡಲಗಿ ವಲಯವು 2012 ರಿಂದ ರಾಜ್ಯದಲ್ಲಿಯೇ ಅತೀ ಹೆಚ್ಚು ಈ ಸ್ಪಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಲಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಾಗಿರುವ ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನವನ್ನು ಒದಗಿಸುತ್ತವೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಪೈಪೋಟಿ ನೀಡಲು ವಲಯದ ಸಂಪನ್ಮೂಲ ಶಿಕ್ಷಕರ ಅವಿರತ ಪ್ರಯತ್ನ ಸಾಕಷ್ಟಿದೆ. ಪರೀಕ್ಷೆಯ ಸುತ್ತೋಲೆಯ ನಂತರ ಸಿ.ಆರ್.ಪಿ, ಬಿಆರ್.ಪಿ, ಇಸಿಒ, ಬಿಆರ್.ಸಿ, ಸಭೆಯ ಮೂಲಕ ಶಾಲಾ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಲಾಗಿತ್ತು. ಅತಿ ಹೆಚ್ಚು ಅರ್ಜಿ ಸಲ್ಲಿಸುವಂತೆ ಪ್ರೇರೆಪಿಸಿ ಅಭಿನಂದಿಸಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಶಿಕ್ಷಕರಿಗೆ ವಿಶೇಷ ಸಂಪನ್ಮೂಲ ಶಿಕ್ಷಕರಿಂದ ಪ್ರತ್ಯೇಕ ಕಾರ್ಯಾಗಾರಗಳನ್ನು ಏರ್ಪಡಿಸಿದೆ. ವಾಟ್ಸಫ್ ಗ್ರುಫ್, ಗೂಗಲ್ ಮೀಟಿಂಗ್, ವಿಶೇಷ ವರ್ಗಗಳ ಆಯೋಜನೆ, ಪ್ರೋಜೆಕ್ಟರ್, ಯೂ ಟ್ಯೂಬ್ ಮೂಲಕ ಪಾಠಗಳ ವೀಕ್ಷಣೆ, ಮಾದರಿ ಪರೀಕ್ಷೆಗಳು, ಹಳೇ ಪ್ರಶ್ನೆ ಪತ್ರಿಕೆಗಳ ಉಜಳನೆಯಂತಹ ಕಾರ್ಯದ ಜೊತೆಗೆ ತಂಡಗಳನ್ನು ರಚಿಸಿ ವಲಯದ ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಸಿಗುವಂತೆ ಮಾಡಲಾಗಿದೆ.
ತಾಲೂಕಿನ ಎನ್.ಟಿ.ಎಸ್.ಇ ಪರೀಕ್ಷಾ ಕೇಂದ್ರಗಳು- ಎಸ್.ಎಸ್.ಆರ್ ಕಾಲೇಜು (ರ.ನಂ 41202540001-0300) ಎಮ್.ಇ.ಎಸ್ ಪದವಿ ಕಾಲೇಜು (41202541001-41300), ಆರ್.ಡಿ.ಎಸ್ ಪಿಯು ಕಾಲೇಜು (41202542001-42300), ವಿದ್ಯಾನಿಕೇತನ ಪ್ರಾಥಮಿಕ ಶಾಲೆ (41202543001-43300), ಕೆ.ಎಚ್ ಎಸ್ ಸರಕಾರಿ ಪ್ರೌಢ ಶಾಲೆ ( 41202544001-44200), ಸರಕಾರಿ ಪ್ರೌಢ ಶಾಲೆ ಗುರ್ಲಾಪೂರ (41202545001-45300), ಶ್ರೀ ಶ್ರೀನಿವಾಸ ಶಾಲೆ ( 41202546001-46182). ಎನ್.ಎಮ್.ಎಮ್.ಎಸ್ ಪರೀಕ್ಷಾ ಕೇಂದ್ರಗಳು- ಮೇಘಾ ಪ್ರೌಢ ಶಾಲೆ ನಾಗನೂರ ( 41201443001-43300), ಚೈತನ್ಯ ಪ್ರೌಢ ಶಾಲೆ ನಾಗನೂರ (41201444001-44300), ಶ್ರೀಪಾದಬೋಧ ಸರಕಾರಿ ಪದವಿ ಕಾಲೇಜು ( 41201445001-45221), ಸಿ.ಎನ್ ಮುಗಳಖೋಡ ಪ್ರಾಥಮಿಕ ಶಾಲೆ ( 41201446001-46240), ಶ್ರೀಮತಿ ಉಮಾಬಾಯಿ ಪ್ರೌಢ ಶಾಲೆ ( 41201447001-47200), ಸರಕಾರಿ ಹೆಣ್ಣು ಮಕ್ಕಳ ಶಾಲೆ ( 41201448001-48200), ಎಲ್ ವಾಯ್ ಅಡಿಹುಡಿ ಪ್ರಾಥಮಿಕ ಶಾಲೆ (41201449001-49300), ಶ್ರೀ ಸಾಯಿ ಪಿಯು ಕಾಲೇಜು (41201450001-450200), ಶಿವರಾಮ ದಾದಾ ಪ್ರಾಥಮಿಕ ಶಾಲೆ ( 41201451001- 51200). ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ. ಮಕ್ಕಳು ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರದಲ್ಲಿ ಬರಬೇಕು. ಕುಡಿಯುವ ನೀರು, ಊಟೋಪಚಾರ ವ್ಯವಸ್ಥೆಯೊಂದಿಗೆ ಬರಲು ಬಿಇಒರವರು ತಿಳಿಸಿದ್ದಾರೆ.