ಗೋಕಾಕ:ಪೈಪಲೈನ್ ಅಳವಡಿಕೆ ಕಾಮಗಾರಿಗೆ ಡಾ.ರಾಜೇಂದ್ರ ಸಣ್ಣಕ್ಕಿ ಚಾಲನೆ
ಪೈಪಲೈನ್ ಅಳವಡಿಕೆ ಕಾಮಗಾರಿಗೆ ಡಾ.ರಾಜೇಂದ್ರ ಸಣ್ಣಕ್ಕಿ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜ 24 :
ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಯತ್ನದಿಂದ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಶನಿವಾರದಂದು ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಜ್ಜಿಹಾಳ ಗ್ರಾಮದಿಂದ ಗಲಗಲಿ ತೋಟ , ತಿರಕನ್ನವರ ತೋಟ ಹಾಗೂ ಬಣಜಿಗೇರ ತೋಟಕ್ಕೆ ಕುಡಿಯುವ ನೀರು ಸರಬರಾಜು ಪೈಪ್‍ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲಾ ಪಂಚಾಯತಿ 2020-21 ನೇ ಸಾಲಿನ ಎಚ್‍ಡಿಪಿ ಯೋಜನೆಯ ಸುಮಾರು 10 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ 15 ನೇ ಹಣಕಾಸಿನ ಯೋಜನೆಯ 3 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಸ್ಥಳೀಯರ ಬೇಡಿಕೆಯಂತೆ ಕುಡಿಯುವ ನೀರು ಸರಬರಾಜು ಪೈಪ್‍ಲೈನ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು , ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಈ ಸಂದರ್ಭದಲ್ಲಿ ಗೋಕಾಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಐ.ಎಮ್.ದಫೇದಾರ
ವಾಸು ಗಲಗಲಿ, ಸಿದ್ದು ಸುಳ್ಳನ್ನವರ, ಗುರುನಾಥ ದಳವಾಯಿ, ಮಾರುತಿ ಬಣಜಿಗೇರ, ಹನುಮಂತ ಪೂಜೇರ, ನ್ಯಾಯವಾದಿ ಗಲಗಲಿ, ಲಕ್ಷ್ಮಣ ದೊಡ್ಡಮನಿ ಸೇರಿದಂತೆ ಗ್ರಾಪಂ ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು ಇದ್ದರು.