RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮತದಾನದ ಬಗ್ಗೆ ಅಸಡ್ಡೆ, ತಿರಸ್ಕಾರ ಮಾಡಬೇಡಿ : ತಹಶೀಲ್ದಾರ ಪ್ರಕಾಶ

ಗೋಕಾಕ:ಮತದಾನದ ಬಗ್ಗೆ ಅಸಡ್ಡೆ, ತಿರಸ್ಕಾರ ಮಾಡಬೇಡಿ : ತಹಶೀಲ್ದಾರ ಪ್ರಕಾಶ 

ಮತದಾನದ ಬಗ್ಗೆ ಅಸಡ್ಡೆ, ತಿರಸ್ಕಾರ ಮಾಡಬೇಡಿ : ತಹಶೀಲ್ದಾರ ಪ್ರಕಾಶ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 25 :

 

 

18 ವರ್ಷ ಮೇಲ್ಪಟ್ಟ ಎಲ್ಲರೂ ವಿವೇಚನಾಶೀಲರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನೂ ಗಟ್ಟಿಗೊಳಿಸುವಂತೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಹೇಳಿದರು.
ಸೋಮವಾರದಂದು ನಗರದ ಜಿಇಎಸ್‍ನ ಸಭಾ ಭವನದಲ್ಲಿ ಜೆಎಸ್‍ಎಸ್ ಮಹಾವಿದ್ಯಾಲಯ, ತಾಲೂಕಾಡಳಿತ, ತಾಲೂಕ ಪಂಚಾಯತ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶ ಹಾಗೂ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಲು ಯೋಗ್ಯವಾದ ಸರ್ಕಾರವನ್ನು ಆಯ್ಕೆ ಮಾಡುವಂತಹ ಅಧಿಕಾರವನ್ನು ಮತದಾರರಿಗೆ ನೀಡಿದ್ದು ತಮ್ಮ ಅಮೂಲ್ಯವಾದ ಮತವನ್ನು ಹಾಗೂ ತಮ್ಮ ಹಕ್ಕನ್ನು ಅಧಿಕಾರಯುತವಾಗಿ ಚಲಾಯಿಸಬೇಕು. ಮತದಾನದ ಬಗ್ಗೆ ಅಸಡ್ಡೆ, ತಿರಸ್ಕಾರ ಮಾಡಬೇಡಿ, ಹಿಂದೆ ನಿರ್ದಿಷ್ಠ ಜನರಿಗೆ ಸೀಮಿತವಾದ ಮತದಾನದ ಹಕ್ಕು ಇಂದು 18 ವರ್ಷ ಮೇಲ್ಪಟ್ಟ ಎಲ್ಲ ವರ್ಗದವರಿಗೂ ದೊರತಿದ್ದು, ಅದನ್ನು ಚುನಾವಣೆಯಲ್ಲಿ ತಾವು ಚಲಾಯಿಸಿ ಇತರಲ್ಲೂ ಮತ ಚಲಾಯಿಸಲು ಅರಿವು ಮೂಡಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತಹಶೀಲದಾರರರು ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಪ್ರತಿಜ್ಞಾವಿದಿ ಭೋದಿಸಿ, ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಿದರು.
ವೇದಿಕೆ ಮೇಲೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಪ್ರಾಚಾರ್ಯ ಡಾ.ಎಸ್.ಎಸ್.ತೇರದಾಳ, ಉಪನ್ಯಾಸಕ ಡಾ. ಬಿ.ಎಮ್.ತುರಡಗಿ ನಗರ ಠಾಣೆಯ ಪಿಎಸ್‍ಐ ಬಿ.ಕೆ.ವಾಲಿಕಾರ ಇದ್ದರು.
ಉಪನ್ಯಾಸಕರಾದ ಶ್ರೀಮತಿ ಡಾ: ಎ.ಎಸ್.ತೇರದಾಳ ಸ್ವಾಗತಿಸಿದರು, ಡಾ.ಎಸ್.ಬಿ.ಹೊಸಮನಿ ನಿರೂಪಿಸಿದರು, ಡಾ: ರಾಜೇಶ್ವರಿ ಎಚ್.ವಿ. ವಂದಿಸಿದರು.

Related posts: