RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪೊಲೀಸ ಇಲಾಖೆಯ ಪಾತ್ರ ಮಹತ್ವದಾಗಿದೆ : ಡಿ.ಎಸ್.ಪಿ ಜಾವೇದ ಇನಾಮದಾರ

ಗೋಕಾಕ:ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪೊಲೀಸ ಇಲಾಖೆಯ ಪಾತ್ರ ಮಹತ್ವದಾಗಿದೆ : ಡಿ.ಎಸ್.ಪಿ ಜಾವೇದ ಇನಾಮದಾರ 

ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪೊಲೀಸ ಇಲಾಖೆಯ ಪಾತ್ರ ಮಹತ್ವದಾಗಿದೆ : ಡಿ.ಎಸ್.ಪಿ ಜಾವೇದ ಇನಾಮದಾರ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 26 :

 
ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪೊಲೀಸ ಇಲಾಖೆಯ ಪಾತ್ರ ಮಹತ್ವದಾಗಿದೆ ಎಂದು ಗೋಕಾಕ ಡಿ.ಎಸ್.ಪಿ ಜಾವೇದ ಇನಾಮದಾರ ಹೇಳಿದರು

ಮಂಗಳವಾರದಂದು ನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಶ್ರೀ ರಾಮ ಸೇವಾ ಸಮಿತಿ ಹಾಗೂ ಶ್ರೀ ಸಾಯಿ ವಿದ್ಯಾ ಚೇತನ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ 72 ನೇ ಗಣರಾಜ್ಯೋತ್ಸವ ಅಂಗವಾಗಿ ಆರಕ್ಷಕರಿಗೊಂದು ಗೀತ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು .

ಕೊರೋನಾ, ಪ್ರವಾಹ ಸೇರಿದಂತೆ ಇತರ ತುರ್ತು ಸಂದರ್ಭಗಳಲ್ಲಿ ಎದುರಾಗುವ ಕಾರ್ಯಗಳನ್ನು ಪೊಲೀಸ ಇಲಾಖೆ ಸಿಬ್ಬಂದಿಗಳು ಸವಾಲಾಗಿ ತಗೆದುಕೊಂಡು ತಮ್ಮ ಜೀವದ ಹಂಗು ತೊರೆದು ಜನಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತಾರೆ.ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಸಿದ್ಧವಿದ್ದು, ಸಾರ್ವಜನಿಕರು ಸಹಕರಿಸಿದರೆ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪೊಲೀಸ ಇಲಾಖೆಯ ಸಿಬ್ಬಂದಿಗಳಿಗೆ ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಡಿ.ಜಿ ಮಹಾಂತ , ಜೈಲರ್ ಅಂಬರೀಶ್ ಪೂಜಾರಿ, ಮುಖಂಡರುಗಳಾದ ಜಯಾನಂದ ಮುನವಳ್ಳಿ, ಸಿದ್ದಲಿಂಗ ದಳವಾಯಿ, ಶಾಮಾನಂದ ಪೂಜೇರಿ, ಮಹಾಂತೇಶ ತಾಂವಶಿ, ಪ್ರಶಾಂತ ಕುರಬೇಟ, ಬಸವರಾಜ ಹೂಳ್ಳೇರ, ರಾಮಚಂದ್ರ ಕಾಕಡೆ ಇದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಆರ್.ಎಲ್.ಮಿರ್ಚಿ ನಿರೂಪಿಸಿ, ವಂದಿಸಿದರು.

Related posts: