RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ : ಡಿ.ಎಸ್.ಪಿ ಜಾವೇದ ಇನಾಮದಾರ ಕರೆ

ಗೋಕಾಕ:ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ : ಡಿ.ಎಸ್.ಪಿ ಜಾವೇದ ಇನಾಮದಾರ ಕರೆ 

ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ : ಡಿ.ಎಸ್.ಪಿ ಜಾವೇದ ಇನಾಮದಾರ ಕರೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 27 :

 
ಮಾನವೀಯತೆಯು ಬಹುದೊಡ್ಡ ಧರ್ಮವೆಂದು ಮಹಾತ್ಮರು ನೀಡಿದ ಸಂದೇಶವನ್ನು ಆಚರಣೆಗೆ ತರುವ ಮೂಲಕ ಮಾನವೀಯ ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತೆ ಡಿವಾಯ್‍ಎಸ್‍ಪಿ ಜಾವೇದ ಇನಾಮದಾರ ಕರೆ ನೀಡಿದರು.
ಮಂಗಳವಾರದಂದು ಸಂಜೆ ನಗರದ ಯೋಗಿಕೊಳ್ಳ ರಸ್ತೆಯ ಸ್ಪೈಸ್ ಗಾರ್ಡನ್ ಆವರಣದಲ್ಲಿ ಇಲ್ಲಿಯ ಜೆಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರೀಕರನ್ನು ರೂಪಿಸಲು ಜೆಸಿಐ ಸಂಸ್ಥೆ ಕಾರ್ಯೋನ್ಮುಕವಾಗಿರುವುದು ಮಾದರಿಯಾಗಿದೆ. ನಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಾಗ ಮಾತ್ರ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದರ ಜೊತೆಗೆ ನೆಮ್ಮದಿಯ ಜೀವನ ಸಾಧ್ಯ. ನಾವೆಲ್ಲರೂ ಒಂದೇ ಎಂಬ ಮಾನವೀಯತೆಯ ಭಾವನೆಯಿಂದ ಬದುಕಿ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಪಣ ತೊಡೋಣವೆಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶಿರ್ವಚನ ನೀಡುತ್ತಾ ಅಧಿಕಾರಕ್ಕೆ ಅಂಟಿಕೊಳ್ಳದೇ ಸಂತೋಷದಿಂದ ಅಧಿಕಾರ ಹಸ್ತಾಂತರ ಮಾಡುತ್ತಿರುವುದು ಇಂದಿನ ರಾಜಕೀಯ ವ್ಯವಸ್ಥೆಗೆ ಒಳ್ಳೆಯ ಸಂದೇಶವನ್ನು ನೀಡಿದೆ. ಅಧಿಕಾರ ಶಾಶ್ವತವಲ್ಲ, ಹುಟ್ಟು-ಸಾವಿನ ನಡುವಿನ ದಿನಗಳನ್ನು ಅರ್ಥಪೂರ್ಣವಾಗಿ ಸಮಾಜ ಸೇವೆಗೆ ಮೀಸಲಿಡಬೇಕು. ಕಲ್ಲು-ಮಣ್ಣು-ಲೋಹಗಳಲ್ಲಿ ದೇವರನ್ನು ಕಾಣದೇ ಮಾನವರಲ್ಲಿ ದೇವರನ್ನು ಕಾಣಬೇಕು. ಮನುಷ್ಯರನ್ನು ಗೌರವಿಸಿ ಅವರಲ್ಲಿ ದೇವರನ್ನು ಕಾಣುವಂತಹ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ. ಬಡಕುಟುಂಬಗಳಿಗೆ, ವಿದ್ಯಾರ್ಥಿಗಳಿಗೆ, ಧಾರ್ಮಿಕ ಕಾರ್ಯ, ಕೋವಿಡ್-19 ಮಹಾಮಾರಿಯ ಸಂದರ್ಭದಲ್ಲಿ ತಮ್ಮ ಸೇವಾ ಮನೋಭಾವವನ್ನು ಪ್ರದರ್ಶಿಸುತ್ತಾ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಸಂಸ್ಥೆಯ ಪದಾಧಿಕಾರಿಗಳು ಮಾಡುತ್ತಿದ್ದಾರೆ. ಎಲ್ಲರೊಂದಿಗೆ ಪ್ರೀತಿಯಿಂದ ಬದುಕುವುದೇ ನಿಜವಾದ ಜೀವನವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಚಂದ್ರಶೇಖ ಕಡೆವಾಡಿ, ಉಪಾಧ್ಯಕ್ಷರಾದ ರಾಚಪ್ಪ ಅಮ್ಮಣಗಿ, ಭಾಗಿರಥಿ ನಂದಗಾಂವಿ, ಪ್ರಕಾಶ ಬಿಳ್ಳೂರ, ಮಲ್ಲಪ್ಪ ಮದಿಹಳ್ಳಿ, ಡಾ: ಪ್ರಮೋದ ಎತ್ತಿನಮನಿ, ರಾಜೇಶ್ವರಿ ಹಳ್ಳಿ, ಪ್ರಧಾನ ಕಾರ್ಯದರ್ಶಿ ಶೇಖರ ಉಳ್ಳೆಗಡ್ಡಿ ಸಹಕಾರ್ಯದರ್ಶಿ ಸಂಜು ಜಾಧವ, ಖಜಾಂಚಿ ಸಂತೋಷ ಹವಾಲ್ದಾರ ಹಾಗೂ ಇತರ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಅಧಿಕಾರಿಯಾಗಿ ಆಗಮಿಸಿದ್ದ ಪೂರ್ವ ವಲಯ ಅಧ್ಯಕ್ಷ ಸ್ವಾಮಿ ಎಚ್. ಅವರು ಪ್ರತಿಜ್ಞಾವಿಧಿ ಭೋದಿಸಿದರು. ವಲಯ ಉಪಾಧ್ಯಕ್ಷೆ ದೀಪಿಕಾ ಬಿದರಿ ನೂತನ ಸದಸ್ಯರಿಗೆ ಪ್ರಮಾಣ ವಚನ ಭೋದಿಸಿದರು.
ವೇದಿಕೆ ಮೇಲೆ ನಿಕಟಪೂರ್ವ ಅಧ್ಯಕ್ಷ ರಜನಿಕಾಂತ ಮಾಳೋದೆ, ಪೌರಾಯುಕ್ತ ಶಿವಾನಂದ ಹಿರೇಮಠ, ಬಿಇಓ ಜಿ.ಬಿ.ಬಳಗಾರ, ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ, ಜಿ.ಪಂ ಎಇಇ ಆಯ್.ಎಮ್. ದಫೆದಾರ, ರೋಟರಿ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಕಡಕೋಳ, ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ಲಾಯಿನ್ಸ ಸಂಸ್ಥೆಯ ಕಾರ್ಯದರ್ಶಿ ಮಹೇಂದ್ರ ಪೋರವಾಲ, ಕೆಎಲ್‍ಇ ಶಾಲೆಯ ಪ್ರಾಚಾರ್ಯೆ ಅನುಪಾ ಕೌಶಿಕ, ನಿವೃತ್ತ ಪೌರಾಯುಕ್ತ ಎಮ್.ಎಚ್.ಅತ್ತಾರ, ವಿಷ್ಣು ಲಾತೂರ, ಮಹಿಳಾ ಘಟಕದ ತೇಜಸ್ವಿನಿ ಕಡೆವಾಡಿ, ಮನಿಷಾ ಮಾಳೋದೆ, ಯುವ ಘಟಕದ ಸುವೀರ ತುಪ್ಪದ, ಆದಿತ್ಯ ವರ್ಜಿ ಇದ್ದರು.
ಮಿನಾಕ್ಷಿ ಸವದಿ ಸ್ವಾಗತಿಸಿದರು, ಕವಿತಾ ತುಪ್ಪದ ನಿರೂಪಿಸಿದರು, ಅನ್ನಪೂರ್ಣಾ ಉಳ್ಳೆಗಡ್ಡಿ ವಂದಿಸಿದರು.

Related posts: