RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಅಶೋಕ ಪಾಟೀಲ ಅವರಿಗೆ ಸನ್ಮಾನ

ಗೋಕಾಕ:ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಅಶೋಕ ಪಾಟೀಲ ಅವರಿಗೆ ಸನ್ಮಾನ 

ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಅಶೋಕ ಪಾಟೀಲ ಅವರಿಗೆ ಸನ್ಮಾನ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 :
ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ಅವರು ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿಗೆ ನಿರ್ದೇಶಕರಾಗಿ ಹಾಗೂ ಕಾರ್ಖಾನೆಯ ಸಲಹಾ ಸಮಿತಿ ಸದಸ್ಯ ಬಸವರಾಜ ಕಲ್ಯಾಣಶೆಟ್ಟಿ ಅವರು ಕರ್ನಾಟಕ ರಾಜ್ಯ ಪಟ್ಟಣ ಬ್ಯಾಂಕಗಳ ಮಹಾಮಂಡಳಕ್ಕೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಕಾರ್ಖಾನೆಯ ಆಡಳಿತ ಮತ್ತು ಸಿಬ್ಬಂದಿವರ್ಗದವರು ಕಾರ್ಖಾನೆಯ ಸಭಾಭವನದಲ್ಲಿ ಶುಕ್ರವಾರದಂದು ಸತ್ಕರಿಸಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ರಾಮಣ್ಣಾ ಮಹಾರೆಡ್ಡಿ, ಸಲಹಾ ಸಮಿತಿ ಸದಸ್ಯ ವಿಕ್ರಮ ಅಂಗಡಿ, ನಿರ್ದೇಶಕರುಗಳಾದ ಬಸಗೌಡ ಪಾಟೀಲ, ಕೃಷ್ಣಾಪ್ಪ ಬಂಡ್ರೋಳ್ಳಿ, ಕೆಂಚನಗೌಡ ಪಾಟೀಲ, ಲಕ್ಷ್ಮಣ ಗಣಪ್ಪಗೋಳ, ಮಲ್ಲಿಕಾರ್ಜುನ ಕಬ್ಬೂರ, ಗಿರೀಶ ಹಳ್ಳೂರ, ಮಾಳಪ್ಪ ಜಾಗನೂರ, ಬೂತಪ್ಪ ಗೋಡೇರ, ಯಲ್ಲವ್ವ ಸಾರಾಪೂರ ಹಾಗೂ ಕಾರ್ಖಾನೆಯ ಅಧಿಕಾರಿ ಜೆ.ಆರ್.ಬಬಲೇಶ್ವರ ಸೇರಿದಂತೆ ಸಿಬ್ಬಂದಿವರ್ಗದವರು ಇದ್ದರು.

Related posts: