RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸಮುದಾಯ ಭವನಗಳ ಸೇರಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ

ಗೋಕಾಕ:ಸಮುದಾಯ ಭವನಗಳ ಸೇರಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ 

ಸಮುದಾಯ ಭವನಗಳ ಸೇರಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :

 

ನೀರಾವರಿ ಇಲಾಖೆಯಿಂದ ಎಸ್‍ಸಿಪಿ ಯೋಜನೆಯಡಿ ಗೋಕಾಕ ವಿಧಾನಸಭಾ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 5.55 ಕೋಟಿ ರೂಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಅಳವಡಿಕೆ ಹಾಗೂ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಶನಿವಾರದಂದು ಚಾಲನೆ ನೀಡಲಾಯಿತು.
ಗೋಕಾಕ ಮತಕ್ಷೇತ್ರದ ಮಕ್ಕಳಗೇರಿ ಗ್ರಾಮದಲ್ಲಿ 1.50 ಕೋಟಿ, ಕೊಳವಿ ಗ್ರಾಮದಲ್ಲಿ 90 ಲಕ್ಷ, ಉಪ್ಪಾರಹಟ್ಟಿ ಗ್ರಾಮದಲ್ಲಿ 1.95 ಕೋಟಿ, ಮಾಲದಿನ್ನಿ ಗ್ರಾಮದಲ್ಲಿ 1.20 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಅಳವಡಿಕೆ ಹಾಗೂ ಸಮುದಾಯ ಭವನಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ತಾ.ಪಂ ಸದಸ್ಯ ಭರಮಣ್ಣ ಮುತ್ತೆನ್ನವರ, ಮುಖಂಡರುಗಳಾದ ಶಿವಪುತ್ರ ದುರದುಂಡಿ, ಸೈಯ್ಯದಹುಸೇನ ಹೂಲಿಕಟ್ಟಿ, ಪಾಂಡಪ್ಪ ಮೇಟಿ, ರವೀಂದ್ರ ನಂದಗಾಂವ, ಸತ್ತೆಪ್ಪ ನಾಯಿಕ, ಸಿ.ಬಿ.ಕಳ್ಳಿಗುದ್ದಿ, ಕರೆಪ್ಪ ಬಡಿಗವಾಡ, ಶಂಕರ ವಣಕಿ, ರಾಮಣ್ಣ ಖಾನಾಪೂರ, ಅಡಿವೆಪ್ಪ ಅಂಗಡಿ, ಹಣಮಂತ ದುರ್ಗನ್ನವರ, ಕರೆಪ್ಪ ಕೊಳವಿ, ಹಣಮಂತ ಖಿಚಡಿ, ಯಲ್ಲಪ್ಪ ನಂದಿ, ವಿಠ್ಠಲ ನಂದಿ, ತಮ್ಮಣ್ಣ ಬಂಡಿ, ಶೇಖರ ಜೋಗ್ಯಾಗೋಳ, ನೀರಾವರಿ ಇಲಾಖೆಯ ಅಧಿಕಾರಿಗಳಾದ ಕೆ.ವಾಯ್.ಕಣ್ಣೂರಕರ, ಆಶ್ವಿನ ಎಚ್.ಜಿ. ಎಸ್.ಬಿ.ಕೊಟಬಾಗಿ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು.

Related posts: