RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸರಕಾರಿ ನೌಕರರು ಸರಕಾರ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಾಗಿ ಕಾರ್ಯ ಮಾಡುತ್ತಾರೆ : ಬಿಇಒ ಬಳಗಾರ

ಗೋಕಾಕ:ಸರಕಾರಿ ನೌಕರರು ಸರಕಾರ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಾಗಿ ಕಾರ್ಯ ಮಾಡುತ್ತಾರೆ : ಬಿಇಒ ಬಳಗಾರ 

ಸರಕಾರಿ ನೌಕರರು ಸರಕಾರ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಾಗಿ ಕಾರ್ಯ ಮಾಡುತ್ತಾರೆ : ಬಿಇಒ ಬಳಗಾರ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 1 :

 
ಸರಕಾರಿ ನೌಕರರು ಸಮಾಜ ಸೇವೆಯಲ್ಲಿ ತೊಡಗಿಕೊಂಡು ಸರಕಾರ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಬಿಇಒ ಜಿ.ಬಿ.ಬಳಗಾರ ಹೇಳಿದರು.

ಸೋಮವಾರದಂದು ನಗರದ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕ , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಗೋಕಾಕ ತಾಲೂಕಾ ಎಲ್ಲ ಸರಕಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ
ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಕುರಿತು ಕಾರ್ಯಾಗಾರ ಪ್ರತಿಭಾ ಪುರಸ್ಕಾರ , ಸಾಧನಾ ಪುರಸ್ಕಾರ ತಾಲೂಕಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ವರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಸರಕಾರ ಸರಕಾರಿ ನೌಕರರ ಮೇಲೆ ಭರವಸೆ ಇಟ್ಟು ಅನೇಕ ಯೋಜನೆಯಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದು, ಈ ಕಾರ್ಯವನ್ನು ನಾವೆಲ್ಲರೂ ಜವಾಬ್ದಾರಿಯಿಂದ ಮಾಡಬೇಕು. ನೌಕರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸರಕಾರಿ ನೌಕರರ ಸಂಘಟನೆಗಳು ಹುಟ್ಟಿಕೊಂಡಿವೆ ಸಂಘಟನೆಗಳು ನೌಕರರ ಹಿತ ಕಾಯ್ದುಕೊಂಡು ಸಮಾಜವನ್ನು ನಿರ್ಮಿಸುವಂತ ಕಾರ್ಯ ಚುಟುವಟಿಕೆಗಳನ್ನು ಮಾಡಬೇಕು.ಸಮಾಜಕ್ಕೆ ಶಕ್ತಿಯಾಗಿ ಕೆಲಸ ಮಾಡಬೇಕು ನಮ್ಮ ನಮ್ಮ ಇಲಾಖೆಗೆ ಶಕ್ತಿಯಾಗಿ ಕಾರ್ಯಮಾಡೋಣಾ ಎಂದು ಹೇಳಿದರು.

ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಕುರಿತು ಮಾತನಾಡಿದ ಉಪನ್ಯಾಸಕ ನಾಗರಾಜ ಕಾಳೆ ಇಂದಿನ ತಾಂತ್ರಿಕ ಯುಗದಲ್ಲಿನ ಮಕ್ಕಳ ಭೌದ್ದಿಕ ಮಟ್ಟಕ್ಕೆ ಅನುಗುಣವಾಗಿ ಶಿಕ್ಷಣ ನೀಡುವುದರೊಂದಿಗೆ ಅವರಿಗೆ ಬದುಕನ್ನು ಹೋಸ ಶಿಕ್ಷಣ ನೀತಿ ನೀಡುತ್ತದೆ. ಎಲ್ಲರಿಗೂ ಗುಣಮಟ್ಟದ ಸಮಾನ ಶಿಕ್ಷಣ ನೀಡುವ ಗುರಿಯನ್ನು ಈ ಶಿಕ್ಷಣ ಹೊಂದಿದೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸರಕಾರಿ ನೌಕರರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸರಕಾರಿ ಸೇವೆಯಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರನ್ನು ಸತ್ಕರಿಸಿ,ಗೌರವಿಸಲಾಯಿತು
ಕಾರ್ಯಕ್ರಮವನ್ನು ಶಿಕ್ಷಕ ಆರ್.ಎಲ್‌.ಮಿರ್ಚಿ ನಿರೂಪಿಸಿದರು, ಶಿಕ್ಷಕ ಟಿ.ಬಿ.ಬಿಲ್ ವಂದಿಸಿದರು

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ, ಭೀಮಗೌಡ ಪೊಲೀಸಗೌಡರ , ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ, ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಿಕ ,ಮುಖ್ಯ ಕರ್ನಾಟಕ ರಾಜ್ಯ ಸರಕಾರಿ ನೋಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಮುರಗೋಡ, ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ , ತಾಲೂಕಾ ವೈದ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಎಂ.ಬಿ.ಪಾಟೀಲ, ಕೆ.ಎನ್.ವಣ್ಣೂರ, ಜಿ.ಆರ್.ಮಾಳಗಿ, ಜಿ.ಜಿ ಬೆನ್ನೇರ , ಆರ್.ಜಿ ಬಿಸಿರೋಟ್ಟಿ, ಎಸ್.ಎಸ್.ಪಾಟೀಲ, ಡಾ.ಮೋಹನ ಕಮತ, ಆರ್.ಎ.ಗಾಣಿಗೇರ, ಐ.ಎಂ.ದಪ್ಪೇದಾರ , ಕಲಾವತಿ ಮಾಲಾವಡೆ, ಎಂ.ವಾಯ್.ಕಂಬಾರ, ಎಸ್.ಇ .ಕಲ್ಲಪ್ಪನವರ , ದೇವಪ್ಪಾ ಗಿಡಾಕಾವು, ಎಸ್.ಬಿ.ಕಟ್ಟಿಮನಿ, ಎಸ್.ಎಂ.ಲೋಕನ್ನವರ ಸೇರಿದಂತೆ ವಿವಿಧ ನೌಕರರ ಸಂಘಗಳ ಪದಾಧಿಕಾರಿಗಳಾದ , ಪ್ರಧಾನ ಗುರುಗಳು ,ಶಿಕ್ಷಕರು ಇದ್ದರು.

Related posts: