RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:1996-97ನೇ ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಳೆಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ

ಗೋಕಾಕ:1996-97ನೇ ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಳೆಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ 

1996-97ನೇ  ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಳೆಯ ವಿದ್ಯಾರ್ಥಿಗಳ  ಗುರುವಂದನಾ ಕಾರ್ಯಕ್ರಮ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ  ಫೆ 7  : 

ಶಾಲಾ ದಿನಗಳಲ್ಲಿ ತಮಗೆ ವಿದ್ಯೆಯನ್ನು ಧಾರೆ ಎರೆದ ಶಿಕ್ಷಕರನ್ನು ನೆನಪಿನಲ್ಲಿಟ್ಟುಕೊಂಡು, ಅಂದಿನ ಶಾಲೆಯ ಎಲ್ಲ ಸಹಪಾಠಿಗಳು ಒಂದೆಡೆ ಸೇರಿ ಶಿಕ್ಷಕರಿಗೆ ಗುರುವಂದನೆಯಾಗಿ ನಮ್ಮನ್ನು ಗೌರವಿಸುತ್ತಿರುವದು ಸಂತಸ ತಂದಿದೆ ಎಂದು ನಿವೃತ್ತ ಶಿಕ್ಷಕ ಬಿ.ಎ ಕಮತ ಹೇಳಿದರು

ರವಿವಾರದಂದು ನಗರದ ನ್ಯೂ ಇಂಗ್ಲೀಷ ಸ್ಕೂಲ ಸಭಾಂಗಣದಲ್ಲಿ  ನ್ಯೂ ಇಂಗ್ಲೀಷ ಸ್ಕೂಲ ಶಾಲೆಯ  1996-97 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು  ಮಾತನಾಡಿದರು.
   ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡುತ್ತ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ತಮ್ಮಿಂದ ಕಲಿತ ವಿದ್ಯಾರ್ಥಿಗಳು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದಾಗ ಮತ್ತು ಉನ್ನತ ಸ್ಥಾನಮಾನ ಪಡೆದಾಗ ಗುರುವಿಗೆ ನನ್ನ ವಿದ್ಯಾರ್ಥಿ ಎಂಬ ಹೆಮ್ಮೆ ಮೂಡುತ್ತದೆ ಎಂದ ಅವರು ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ತಾವು ಕಲಿತ ಶಾಲೆಗೆ ಸುಣ್ಣ ಬಣ್ಣ ಮಾಡಿಸಿ ಶಾಲೆಯನ್ನು ಶಿಂಗಾರ ಮಾಡಿದ್ದು ಮಾದರಿ ಕಾರ್ಯವಾಗಿದೆ  ಎಂದು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ   ಮುಖ್ಯೋಪಾಧ್ಯಾರಾದ  ಎಸ್.ಎಸ್.ಲಗಮಪ್ಪಗೋಳ , ಬಿ.ಆರ್.ಚಿಪ್ಪಲಕಟ್ಟಿ , ಶಿಕ್ಷಕ ಎಸ್.ಕೆ ಹದಿಗುಂದ, ನಿವೃತ್ತ ಶಿಕ್ಷಕರಾದ ಎಸ್‌ಎಸ್‌ ಅಂಗಡಿ , ಬಿ.ಬಿ.ಪಟಗುಂಡಿ, ಹಳೆಯ ವಿದ್ಯಾರ್ಥಿಗಳಾದ ವೀಣಾ ಜರತಾರಕರ, ಪ್ರೀಯಾ ಚಿಕ್ಕೋಡಿ, ಜ್ಯೋತಿ ಪಟ್ಟಣಶೆಟ್ಟಿ,ದೀಪಾ ಅಂತ್ರೆ,ಪ್ರೇಮಾ ಗಡದಾನಿ,ರವಿ ಗಡಾವಿ,ಮಹೇಶ ಕೋಲಾ,ತವನಪ್ಪ ಬೆನ್ನಾಡಿ,ಸುರೇಶ ತುಪ್ಪಾರಟ್ಟಿ,ಮಹಮ್ಮದ ಮುಲ್ಲಾ, ಶಂಕರ ಯಮಕನಮರಡಿ, ಗುರು ಯಮಕನಮರಡಿ, ಅರುಣ ಅಥಣಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.

Related posts: