ಗೋಕಾಕ:ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಎಂಬುದು ಅತ್ಯದ್ಭುತವಾದ ಕಾಣಿಕೆ : ಎಂ.ಬಿ ಕುಂಬಾರಿ
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಎಂಬುದು ಅತ್ಯದ್ಭುತವಾದ ಕಾಣಿಕೆ : ಎಂ.ಬಿ ಕುಂಬಾರಿ
ಗೋಕಾಕ ಫೆ 8 : ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಎಂಬುದು ಅತ್ಯದ್ಭುತವಾದ ಕಾಣಿಕೆ. ಅದನ್ನು ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಮೊದಲಿಗೆ ನಯ, ವಿನಯ, ಭಕ್ತಿ, ಸಂಸ್ಕರಾರವನ್ನು ಗುರುವಿನಲ್ಲಿ ಕಲಿಯಬೇಕು ಅಂದಾಗ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮ ಬಹುದೆಂದು ನಿವೃತ್ತ ಮುಖ್ಯೋಧ್ಯಾಪಕ ಎಂ.ಬಿ ಕುಂಬಾರಿ ಹೇಳಿದರು.
ರವಿವಾರದಂದು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಪ್ರೌಢಶಾಲೆಯ 1989 -90 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯೆಕಲಿಸಿದ ಗುರುಗಳು ಹಾಗೂ ಗುರುಮಾತೆಯರಿಗೆ ಹಳೆಯ ವಿದ್ಯಾರ್ಥಿ , ವಿದ್ಯಾರ್ಥಿನೀಯರಿಂದ ಶಾಲುಹೊದಿಸಿ ಹಾರ ಹಾಕಿ ಗೌರವ ನಮನ(ಸತ್ಕಾರ) ಸಲ್ಲಿಸಲಾಯಿತು. ತದನಂತರ ಸತ್ಕಾರ ಸ್ವೀಕರಿಸಿ ಎಲ್ಲ ಗುರುಬಳಗ ವಿದ್ಯಾರ್ಥಿಗಳನ್ನುದ್ದೇಶಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಲ್.ಎ ನಿಲಪಂತ,ಶ್ರೀಮತಿ ಎಸ್.ಡಿ ಮಲ್ಲಾಪೂರ,ಶ್ರೀಮತಿ ಎಲ್.ಎಸ್.ಮಂಗಿ,ಶ್ರೀಮತಿ ಎಲ್.ಬಿ ಕಿಣೇಕರ,ಶ್ರೀಮತಿ ಜೆ.ಎ.ಈರನಟ್ಟಿ,ಶ್ರೀಮತಿ ಆರ್.ಎ .ಹೀರೆಮಠ, ಜಿ.ಡಿ.ಹೀರೆಮಠ,ಎಸ್.ಕೆ ಘೋರ್ಪಡೆ, ಎಂ.ಎಸ್.ಪಟ್ಟದಕಲ್ಲು, ಬಿ.ಡಿ. ಬಾಳಕ್ಕನವರ ಬಿ.ಜಿ.ಪಾವಟೆ,ಹಳೆಯ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಅಲಾಸೆ,ರಶ್ಮಿ ಬೆಲ್ಲದ,ಅಂಬರೀಷ್ ಆರ್ ರಾಜಕುಮಾರ ಶೇಂದ್ರಿ,ರಾಜಶೇಖರ ಮಮದಾಪೂರ,ಮಹೇಂದ್ರ ಮಾಳಗಿ, ಲಕ್ಷ್ಮಣ ಯಮಕನಮರಡಿ ಸೇರಿದಂತೆ ಅನೇಕರು ಇದ್ದರು.