RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಂಖ್ಯೆ 112ಕ್ಕೆ ಕರೆ ಮಾಡಿ : ಪಿಎಸ್‍ಐ ಹನಮಂತ ನರಳೆ

ಗೋಕಾಕ:ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಂಖ್ಯೆ 112ಕ್ಕೆ ಕರೆ ಮಾಡಿ : ಪಿಎಸ್‍ಐ ಹನಮಂತ ನರಳೆ 

ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಂಖ್ಯೆ 112ಕ್ಕೆ ಕರೆ ಮಾಡಿ : ಪಿಎಸ್‍ಐ ಹನಮಂತ ನರಳೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಫೆ 8 :

 
ಪೊಲೀಸ್‍ರನ್ನು ಕಂಡರೆ ಭಯ ಬೇಡ. ಪೊಲೀಸ್‍ರಿಗೆ ಸ್ಥಳೀಯರ ಸಹಕಾರ ಅಗತ್ಯವಾದದು, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹೊಸದಾಗಿ ಜಾರಿಗೆ ತಂದಿರುವ ತುರ್ತು ಕರೆ ಸಂಖ್ಯೆ 112ಕ್ಕೆ ಕರೆ ಮಾಡಿದರೆ, 112 ಸಂಖ್ಯೆ ಸಹಾಯವಾಣಿ ವಾಹನ ಕೆಲವೇ ನಿಮಿಷದಲ್ಲಿ ನಿಮ್ಮ ಬಳಿಗೆ ಬರಲಿದೆ ಎಂದು ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನಮಂತ ನರಳೆ ಹೇಳಿದರು.

ರವಿವಾರದಂದು ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಮತ್ತು ಗೋಕಾಕ ಉಪವಿಭಾಗ, ಮೂಡಲಗಿ ಪೊಲೀಸ್ ಠಾಣೆ ಹಾಗೂ ಕುಲಗೋಡ ಪೊಲೀಸ್ ಠಾಣೆ ಸಹಯೋಗದಲ್ಲಿ ನಡೆದ ಜನಸಂಪರ್ಕ ಹಾಗೂ ದಲಿತ ಸಭೆ ಹಾಗೂ ತುರ್ತು ಕರೆ ಸಂಖ್ಯೆ 112ರ ಕುರಿತು ಕರಪತ್ರ ವಿತರಣೆ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಇರಬೇಕು. ಸ್ಥಳೀಯರು ತುರ್ತು ಕರೆ ಸಂಖ್ಯೆ 112ರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ಮೂಡಲಗಿ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಟಗೇರಿ ಗ್ರಾಮ ಪ್ರಜ್ಞಾವಂತರಿರುವ ಗ್ರಾಮವಾಗಿದೆ. ಪೊಲೀಸ್‍ರಿಗೆ ಸ್ಥಳೀಯರು ನೀಡುವ ಸ್ಪಂದನೆ, ಸಹಕಾರ ಶ್ಲಾಘನೀಯವಾಗಿದೆ. ಮೂಡಲಗಿ ಹಾಗೂ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರು ತುರ್ತು ಪರಿಸ್ಥಿತಿ, ಅಗ್ನಿ ಅವಗಡ, 24*7 ಪೊಲೀಸ್ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿದರೆ ಕೆಲವೇ ನಿಮಿಷದಲ್ಲಿ ಸಹಾಯವಾಣಿ ವಾಹನ ನಿಮ್ಮ ಬಳಿಗೆ ಬರಲಿದೆ. ಉಭಯ ಪೊಲೀಸ್ ಠಾಣೆಯ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿ ವಾಹನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಉಪಾಧ್ಯಕ್ಷ ಬಸವಂತ ಕೋಣಿ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ, ಎಎಸ್‍ಐ ಐ.ಎಮ್.ಬೇಪಾರಿ, ಬೀಟ್ ಪೊಲೀಸ್ ಪೇದೆ ಕೆ.ಸಿ.ಬಾಗಲಿ, ಶಿವನಪ್ಪ ಮಾಳೇದ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಸುಭಾಷ ಜಂಬಗಿ, ಈಶ್ವರ ಮುಧೋಳ, ಪ್ರಕಾಶ ಹಾಲಣ್ಣವರ, ಮುತ್ತೆಪ್ಪ ವಡೇರ, ವಿ.ಎಫ್.ಶೆಟ್ಟೆಪ್ಪನ್ನವರ, ವಿ.ಆರ್.ಗಲಬಿ, ಮಹೇಶ ಪೂಜೇರಿ, ಸಿದ್ಧಾರೂಢ ಬಟಬಡೆ, ವೀರಭದ್ರ ನೀಲಣ್ಣವರ, ಸೇರಿದಂತೆ ಸ್ಥಳೀಯರು, ಇತರರು ಇದ್ದರು.

Related posts: