ಗೋಕಾಕ:ನಾಡು, ನುಡಿ, ಕಲೆ, ಸಾಹಿತ್ಯದ ವಿಚಾರಗಳು ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಡೊಣಾ : ಡಾ.ಸಿ.ಕೆ ನಾವಲಗಿ
ನಾಡು, ನುಡಿ, ಕಲೆ, ಸಾಹಿತ್ಯದ ವಿಚಾರಗಳು ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಡೊಣಾ : ಡಾ.ಸಿ.ಕೆ ನಾವಲಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 11 :
ನಗರದಲ್ಲಿ ಫೆ.27 ರಂದು ನಡೆಯಲಿರುವ ಗೋಕಾಕ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡ ಜಾನಪದ ವಿಧ್ವಾಂಸ ಡಾ.ಸಿ.ಕೆ ನಾವಲಗಿ ಅವರನ್ನು ಗುರುವಾರದಂದು ತಾಲೂಕು ಕಸಾಪದಿಂದ ಅಧಿಕೃತ ಆಹ್ವಾನ ನೀಡಲಾಯಿತು.
ಕಸಾಪ ಪದಾಧಿಕಾರಿಗಳು ನಗರದಲ್ಲಿರುವ ಅವರ ಮನೆಗೆ ತೆರಳಿ ಸಾಹಿತಿ ಡಾ.ಸಿ.ಕೆ ನಾವಲಗಿ ಅವರನ್ನು ಸನ್ಮಾನಿಸಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಆಹ್ವಾನ ನೀಡಿದರು.
ಸನ್ಮಾನ ಸ್ವೀಕರಿಸಿ ಸಾಹಿತಿ ಡಾ.ಸಿ.ಕೆ ನಾವಲಗಿ ಮಾತನಾಡಿ, ಸಮಾಜದಲ್ಲಿ ಬದುಕು ನಡೆಸಲು ವಿವಿಧ ವೃತ್ತಿ ಅವಲಂಬಿಸುವುದು ಸಹಜ. ಕನ್ನಡ ನಾಡು, ನುಡಿಯ ಬಗ್ಗೆ ಬಾಲ್ಯದಿಂದಲೂ ಅಭಿಮಾನ ಹೊಂದಿದ್ದು, ವೃತ್ತಿ ಜೊತೆಗೆ ಕಲೆ, ಸಾಹಿತ್ಯ ಅಭಿರುಚಿ ಬೆಳೆಸಿಕೊಂಡ ನನಗೆ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸಂತಸ ತಂದಿದೆ
‘ಪ್ರತಿಯೊಬ್ಬರೂ ತಮ್ಮ ಜೀವಿತದ ಅವಧಿಯಲ್ಲಿ ವ್ಯೆಯಕ್ತಿಕ ಜವಾಬ್ದಾರಿ ಜೊತೆಗೆ ಸಮಾಜಕ್ಕಾಗಿ ಏನು ಕೊಡುಗೆ ನೀಡಿದ್ದೇನೆ ಎನ್ನುವ ಬಗ್ಗೆ ಪ್ರಶ್ನಿಸಿಕೊಳ್ಳಬೇಕು. ಸ್ವಾರ್ಥ ಮನೋಭಾವದಿಂದ ಹೊರಬಂದು ಕಿಂಚಿತ್ತಾದರೂ ಸಮಾಜಕ್ಕಾಗಿ ಕೈಲಾದ ಸೇವೆ ಮಾಡುವ ಮನಃಸ್ಥಿತಿ ಹೊಂದಬೇಕು. ನಾಡು, ನುಡಿ, ಕಲೆ, ಸಾಹಿತ್ಯದ ವಿಚಾರಗಳು ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಡಲು ಶ್ರಮಿಸೋಣ’ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ತಾಂವಶಿ, ಹಿರಿಯ ಸಾಹಿತಿ ಚಂದ್ರಶೇಖರ್ ಅಕ್ಕಿ, ಗಂಗಾಧರ ಮಳಗಿ,ಮಹಾನಿಂಗ ಮಂಗಿ,ಸುರೇಶ ಮುದ್ದಾರ, ಡಾ.ಸುರೇಶ ಹನಗಂಡಿ, ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ಕರ್ನಾಟಕ ಲಲಿತಕಲಾ ಅಕ್ಯಾಡಮಿ ಸದಸ್ಯ ಜಯಾನಂದ ಮಾದರ, ಎಲ್.ಎಸ್.ಚೌರಿ, ಈಶ್ವರಚಂದ್ರ ಬೆಟಗೇರಿ, ವಸಂತರಾವ ಕುಲಕರ್ಣಿ, ಲಕ್ಷ್ಮಣ ಸೊಂಟಕ್ಕಿ, ಭಾರತಿ ಮದಬಾಂವಿ,ಶಿವಲೀಲಾ ಪಾಟೀಲ್,ಪುಷ್ಪಾ ಮುರಗೋಡ,ಶೈಲಾ ಕೊಕ್ಕರಿ ಸೇರಿದಂತೆ ಇತರರು ಇದ್ದರು.