RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ವೈದ್ಯಕೀಯ ಶಿಕ್ಷಣ ತರಬೇತಿ ಕಾರ್ಯಕ್ರಮ

ಘಟಪ್ರಭಾ:ವೈದ್ಯಕೀಯ ಶಿಕ್ಷಣ ತರಬೇತಿ ಕಾರ್ಯಕ್ರಮ 

ವೈದ್ಯಕೀಯ ಶಿಕ್ಷಣ ತರಬೇತಿ ಕಾರ್ಯಕ್ರಮ

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಫೆ 14 :

 
ಸ್ಥಳೀಯ ಜೆ.ಜಿ ಆಸ್ಪತ್ರೆಯ ಬಿ.ಎ.ಪಾಟೀಲ ಆಯುರ್ವೇದ ಮೆಡಿಕಲ್ ಕಾಲೇಜ ಹಾಗೂ ಆಚಾರ್ಯ ದೇಶಭೂಷಣ ಆಯುರ್ವೇದ ಮೆಡಿಕಲ್ ಕಾಲೇಜ್ ಬೆಡಕಿಹಾಳ ಇವರ ಸಂಯುಕ್ತಾಶ್ರದಲ್ಲಿ ರಾಜೀವ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ಇದರ ರಜತ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಬೆಳಗಾವಿ ವಲಯ ಮಟ್ಟದ ಸಾಮಾನ್ಯ ವೈದ್ಯರಿಗೆ (ಸಿ.ಎಮ್.ಇ) ಮುಂದುವರೆದ ವೈದ್ಯಕೀಯ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಆಯೂಶ ಪಡೆರೇಷನ್ ಅಧ್ಯಕ್ಷರಾದ ಡಾ.ಮೋಹನ ಬಿರಾದರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಹಾಮಾರಿ ಕೊರೋನಾದ ಮುಂದೆ ಜಗತ್ತಿನ ಎಲ್ಲ ತಂತ್ರಜ್ಞಾನಗಳು ವಿಧಲವಾದ ಸಂದರ್ಭದಲ್ಲಿ ಮೂರು ಸಾವಿರ ವರ್ಷಗಳ ಹಿಂದಿನ ಆಯುರ್ವೇದ ಔಷಧಿಗಳು ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವಲ್ಲಿ ಎಷ್ಟು ಉಪಯುಕ್ತಕಾರಿಯಾಗಿವೆ ಎಂಬುದನ್ನು ಜಗತ್ತು ನೋಡಿದೆ. ಆಯುರ್ವೇದವನ್ನು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗುವ ಕಾರ್ಯ ಮಾಡುವ ಜವಾಬ್ದಾರಿ ನಮ್ಮಲ್ಲೆರ ಮೇಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಎಲ್ಲರನ್ನು ಸ್ವಾಗತಿಸಿ ಮಾತನಾಡಿದ ಆಸ್ಪತ್ರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಕೆ.ಎಚ್.ಪಾಟೀಲ, ಜೆ.ಜಿ ಆಸ್ಪತ್ರೆ ಅನೇಕ ವಿವಿಭಾಗಗಳನ್ನು ಹೊಂದಿದೆ. ಅದರಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜು ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರು ಮಾಡಿದೆ ಎಂದು ಹೇಳದರು.
ಉಪನ್ಯಾಸಕರಾಗಿ ಆಗಮಿಸಿದ ಸಾಂಗ್ಲಿ ಜಿಲ್ಲೆಯ ಅಷ್ಠೆ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಸತೆಂದ್ರ ಓಝಾ ಉಸಿರಾಟದ ಸಮಸ್ಯೆ ನಿವಾರಣೆಗಳ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿ.ಆರ್.ಪಾಟೀಲ (ನಾಗನೂರ), ಉಪಾಧ್ಯಕ್ಷರಾದ ಎ.ಎನ್.ಕರಲಿಂಗನವರ,ನಿರ್ದೇಶಕರಾದ ಎ.ಎಸ್.ಬಡಕುಂದ್ರಿ, ಬಿ.ಎಚ್.ಇಲಾಮದಾರ, ಎಸ್.ಎಮ್.ಚಂದರಗಿ, ಎಸ್.ಎಸ್.ದಳವಾಯಿ, ಡಾ.ಸವೀತಾ ಅಂಗಡಿ, ಪ್ರಾಂಶುಪಾಲರಾದ ಜೆ.ಕೆ.ಶರ್ಮಾ, ಸೇರಿದಂತೆ ಅನೇಕ ಕಾಲೇಜುಗಳ ಪ್ರಾಂಶುಪಾಲರು, ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಡಾ.ಭವ್ಯಾ.ಎಸ್ ನಿರೂಪಿಸಿದರು. ಡಾ.ಲಕ್ಷ್ಮೀ ಕತ್ತಿ ವಂದಿಸಿದರು.

 

Related posts:

ಘಟಪ್ರಭಾ:ಬಳೋಬಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಸುಮಾರು 2 ಸಾವಿರ ಸಸಿ ನಟ್ಟು ಸಂಭಮಿಸಿ ಕರವೇ ಕಾರ್ಯಕರ್ತರು

ಗೋಕಾಕ:ಸಫಾಯಿ ಕರ್ಮಚಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಅವರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ : ಅಧ್ಯಕ್ಷ ಎಂ….

ಗೋಕಾಕ:ಸತತವಾಗಿ ಮುಸ್ಲಿಂ ಸಮುದಾಯದ ಬೆಂಬಲದೊಂದಿಗೆ ಶಾಸಕನಾಗುತ್ತಾ ಬಂದಿದ್ದೇನೆ : ಶಾಸಕ ರಮೇಶ ಜಾರಕಿಹೊಳಿ ಅಭಿಮತ