RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ವಾಹನಗಳಿಗೆ ಜಿಪಿಎಸ್ ಅಳವಡಿಸುವಂತ ಆದೇಶವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ

ಗೋಕಾಕ:ವಾಹನಗಳಿಗೆ ಜಿಪಿಎಸ್ ಅಳವಡಿಸುವಂತ ಆದೇಶವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ 

ವಾಹನಗಳಿಗೆ ಜಿಪಿಎಸ್ ಅಳವಡಿಸುವಂತ ಆದೇಶವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ, 16 :

 

ಎಮ್.ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು ವಿವಿಧ ಕುಂದು ಕೊರತೆಗಳನ್ನು ಪರಿಹರಿಸುವಂತೆ ಮಂಗಳವಾರದಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ನಗರದ ಅವರ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ಅನೇಕ ಗ್ರಾಮಗಳ ನದಿ, ಹಳ್ಳ ಹಾಗೂ ಡ್ಯಾಮ್ ಹಿನ್ನೀರಿನಿಂದ ಶೇಖರಿಸಲ್ಪಟ್ಟ ಬದಿಗೆ ಇರುವ ಜಮೀನುಗಳಲ್ಲಿಯ ಮಣ್ಣನ್ನು ತೊಳೆದು ಅದರಲ್ಲಿ ಬರುವ ಕಲ್ಲುಪುಡಿಯನ್ನು ಮರಳು ಎಂದು ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದಾರೆ. ಆದರೆ ಆ ಕಲ್ಲಿನ ಪುಡಿಯು ಕಟ್ಟಡ ಕಾಮಗಾರಿಗೆ ಯೋಗ್ಯವಾಗಿರುವುದಿಲ್ಲ. ಕಾರಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಪೊಲಿಸ್ ವರಿಷ್ಠಾಧಿಕಾರಿಗಳ ಮೂಲಕ ಈ ಅನಧೀಕೃತ ಮರಳನ್ನು ಪರಿಶೀಲಿಸಿ ಸಂಭಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ವಾಹನಗಳಿಗೆ ಜಿಪಿಎಸ್ ಅಳವಡಿಸುವಂತ ಆದೇಶವನ್ನು ಮರುಪರಿಶೀಲಿಸಬೇಕು. ಹೊಸದಾಗಿ ಮರಳುಗಾರಿಕೆಗೆ ಪರವಾಣಿಗೆ ನೀಡಬಾರದು. ಸರ್ಕಾರಿ ಕಾಮಗಾರಿಗಳಿಗೆ ಗುತ್ತಿಗೆದಾರರು ಕಡ್ಡಾಯವಾಗಿ ಎಮ್.ಸ್ಯಾಂಡ್ ಘಟಕಗಳಿಂದಲೇ ಮರಳನ್ನು ಖರಿಧೀಸಬೇಕು. ಎಮ್.ಡಿ.ಪಿ ಮತ್ತು ಜಿಎಸ್‍ಟಿ ಬಿಲ್ಲನ್ನು ಕಡ್ಡಾಯವಾಗಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಬೇಕು. ಹಾಗೂ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಎಮ್.ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕೊಣ್ಣೂರ, ಉಪಾಧ್ಯಕ್ಷ ಸಂಜಯ ಕುಪ್ಪಸಗೌಡರ, ಎಮ್.ಸ್ಯಾಂಡ್ ಮಾಲೀಕರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಆರ್.ಡಿ.ಕಿತ್ತೂರ, ನವೀನ ಮಗದುಮ್ಮ, ರಂಗನಾಥ ಭಜಂತ್ರಿ, ವರ್ಜಿ ಅವರು ಸೇರಿದಂತೆ ಅನೇಕರು ಇದ್ದರು.

Related posts: