ಗೋಕಾಕ:ನೃತ್ಯ ಪರೀಕ್ಷೆಯಲ್ಲಿ ಗೋಕಾಕನ ರತೀಕಾ ನೃತ್ಯ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ
ನೃತ್ಯ ಪರೀಕ್ಷೆಯಲ್ಲಿ ಗೋಕಾಕನ ರತೀಕಾ ನೃತ್ಯ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 17 :
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಧಾರವಾಡನವರು ಕಳೆದ ಡಿಸೆಂಬರನಲ್ಲಿ ಆಯೋಜಿಸಿದ್ದ ನೃತ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ್ದು, ಇಲ್ಲಿನ ರತೀಕಾ ನೃತ್ಯ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆಂದು ನೃತ್ಯ ಶಾಲೆಯ ವಿದುಷಿ ಶ್ರೀಮತಿ ನಾಗರತ್ನಾ ಹಡಗಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕಳೆದ ಡಿಸೆಂಬರನಲ್ಲಿ ಧಾರವಾಡನ ಫ್ರೌಢ ಶಿಕ್ಷಣ ಮಂಡಳಿಯವರು ನಡೆಸಿದ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಗೋಕಾಕ ನಗರದ ರತೀಕಾ ನೃತ್ಯ ಶಾಲೆಯ ಜೂನಿಯರ್ , ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಯಲ್ಲಿ ಶಾಲೆಯ ಎಲ್ಲ ಮಕ್ಕಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.
ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಅಶ್ವಿನಿ ಬಡಿಗೇರ 400 ಕ್ಕೆ 386, ಗೌರಿಶ್ರಿ ಆರ್ 384, ಐಶ್ವರ್ಯ ಭಾಕಳೆ 382,ನಮ್ರತಾ ಹಾಲಭಾಂವಿ 372, ವಿದ್ಯಾ ತೋಟಗಿ 370, ರಾಧಿಕಾ ಜೋಷಿ 369,ಶಾಂಭವಿ ವಣಕಾರಿ 363, ಯಶೋಧಾ ಖಾನಪ್ಪನವರ 359 ಅಂಕಗಳನ್ನು ಪಡೆದಿದ್ದಾರೆ.
ಭರತನಾಟ್ಯ ಸೀನಿಯರ್ ವಿಭಾಗದ ಪರೀಕ್ಷೆಯಲ್ಲಿ ಲಕ್ಷ್ಮೀ ಭಂಡಾರಿ 600 ಕ್ಕೆ 545, ಅಪೂರ್ವ ಗದಗ 528, ಐಶ್ವರ್ಯಾ ದಾಸರ 507,ಭಾಗ್ಯಶ್ರೀ ಭೂತಿ 504, ಸ್ವಂದನಾ ಸುಭಂಜಿ 502,ವಸುಂಧರಾ ವಾಡಕರ 477, ತೇಜಸ್ವಿನಿ ಭೂತಿ 457 ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಇವರ ಈ ಸಾಧನೆಗೆ ನೃತ್ಯ ಶಾಲೆಯ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ