RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಮರಕ್ಕೆ ಬಸ್ ಡಿಕ್ಕಿ -ಘಟಕ ವ್ಯವಸ್ಥಾಪಕ ನೇರ ಹೊಣೆ

ಗೋಕಾಕ:ಮರಕ್ಕೆ ಬಸ್ ಡಿಕ್ಕಿ -ಘಟಕ ವ್ಯವಸ್ಥಾಪಕ ನೇರ ಹೊಣೆ 

ಮರಕ್ಕೆ ಬಸ್ ಡಿಕ್ಕಿ -ಘಟಕ ವ್ಯವಸ್ಥಾಪಕ ನೇರ ಹೊಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 19 :
ಗೋಕಾಕದಿಂದ ಬೆಳಗಾವಿಗೆ ಹೊರಟ್ಟಿದ್ದ ಸಾರಿಗೆ ಬಸ್ ವು ಗೋಡಚಿನಮಲ್ಕಿ ಹಾಗೂ ಮೇಲ್ಮಟ್ಟಿ ಗ್ರಾಮದ ರಸ್ತೆ ಮಧ್ಯೆ ಮರಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಯೋವೃದ್ದರಿಗೆ ಗಂಭೀರ ಗಾಯಗಳಾಗಿವೆ.
ಈ ಘಟನೆಗೆ ಗೋಕಾಕ ಘಟಕ ವ್ಯವಸ್ಥಾಪಕರೇ ನೇರ ಹೊಣೆಗಾರರಾಗಿದ್ದಾರೆ. ಬಸ್ಸಿನ ಚಾಲಕ ವಾಹನದ ಆಯಾ ದಿನದ ನಿವೇದನಾ ಪತ್ರದಲ್ಲಿ ಬಸ್ಸಿನ ಮುಂದಿನ ಬಲಗಡೆ ಮತ್ತು ಹಿಂದಗಡೆ ಪಾಟಾ ವಿಕ್ ಮತ್ತು ಸ್ಟೇರಿಂಗ್ ಬಾಕ್ಸ್ ಆಯಿಲ್ ಲೀಕಿಜ್, ಸ್ಟೇರಿಂಗ್ ಜಾಂಬ,ಬ್ರೇಕ್ ಹತ್ತುವುದಿಲ್ಲ ಮತ್ತು ಬಾಡಿಗೆ ಟೈರ್ ತಿಕ್ಕುತ್ತದೆ ಎಂದು ಬಸ್ಸಿನ ಚಾಲಕ ವಾಹನದ ದೋಷವನ್ನು ವರದಿ ಪುಸ್ತಕದಲ್ಲಿ ಬರೆದಿದ್ದು ಘಟಕ ವ್ಯವಸ್ಥಾಪಕರು ಒತ್ತಾಯ ಪೂರ್ವಕವಾಗಿ ಅದೇ ಬಸ್ಸನ್ನು ಚಾಲಕನಿಗೆ ನೀಡಿದ್ದಾರೆ. ಈ ಅವಘಡಕ್ಕೆ ಘಟಕ ವ್ಯವಸ್ಥಾಪಕರೇ ನೇರಹೊಣೆಗಾರರಾಗಿದ್ದು ಚಾಲಕನ ಯಾವುದೇ ತಪ್ಪು ಇರುವುದಿಲ್ಲ ಎಂದು ತಿಳಿದು ಬಂದಿದೆ. ಗಾಯಾಳುಗಳ ಖರ್ಚು ವೆಚ್ಚವನ್ನು ಘಟಕ ವ್ಯವಸ್ಥಾಪಕರೇ ಭರಿಸಬೇಕು. ಇದರಲ್ಲಿ ಸಾರಿಗೆ ಸಂಸ್ಥೆಯ ಯಾವುದೇ ತಪ್ಪುಗಳು ಇರುವುದಿಲ್ಲ ಎಂದು ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ.

Related posts: