RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:1998-99 ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ನಾಳೆ ಗೌರವ ನಮನ ಕಾರ್ಯಕ್ರಮ

ಗೋಕಾಕ:1998-99 ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ನಾಳೆ ಗೌರವ ನಮನ ಕಾರ್ಯಕ್ರಮ 

1998-99 ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ನಾಳೆ ಗೌರವ ನಮನ ಕಾರ್ಯಕ್ರಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 20 :

 

ಇಲ್ಲಿಯ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ನಮನ ಹಾಗೂ ಸ್ನೇಹಿತರ ಪುನರ್ ಮಿಲನ ಹಾಗೂ ಗುರುಸ್ಮøತಿ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮವು ರವಿವಾರ ದಿ. 21 ರಂದು ಇಲ್ಲಿಯ ಶುಭಂ ಗಾರ್ಡನ್‍ನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಮೇಲ್ವಿಚಾರಕ ಸಂಜು ಚಿಪ್ಪಲಕಟ್ಟಿ ಹೇಳಿದರು.
ಅವರು ಶನಿವಾರದಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ಕಾರ್ಯಕ್ರಮಕ್ಕೆ ವಿದ್ಯಾದಾನ ಮಾಡಿದ ಶಿಕ್ಷಕರಾದ ನಿವೃತ್ತ ಬಿಇಒ ಶ್ರೀಮತಿ ಕೆ.ಎ.ಸನದಿ ಹಾಗೂ ಧಾರವಾಡ ಬಿಇಒ ಎಸ್.ಸಿ.ಕರಿಕಟ್ಟಿ ಹಾಗೂ ಗೋಕಾಕ ಬಿಇಒ ಜಿ.ಬಿ.ಬಳಗಾರ ಸೇರಿದಂತೆ ಎಮ್.ಪಿ.ಗಾಣಗಿ, ಎಂ.ಎ.ಕೋತವಾಲ, ಎಂ.ಎಂ.ಹಾದಿಮನಿ, ಸಿ.ಎಸ್. ಮೇಗಲಮನಿ, ಎ.ಕೆ.ಜಮಾದಾರ, ಬಿ.ಎಸ್.ಸೊಲಬನ್ನವರ, ಎಚ್.ಡಿ.ಬೇಗ, ಎಂ.ಎ.ಬಾಗೇವಾಡಿ, ಡಿ.ವಿ.ಕಾಂಬಳೆ, ಎಂ.ಎಸ್.ವಕ್ಕುಂದ, ಡಿ.ಸಿ.ಜುಗಳಿ, ಎಸ್.ಪಿ.ಹಿರೇಮಠ, ಎಸ್.ಎಸ್.ಮುನವಳ್ಳಿ, ಎಸ್.ಎಂ.ಕಲಗುಡಿ, ಆರ್.ಕೆ.ಹಂದಿಗುಂದ, ಎಂ.ಆರ್.ಹರಿದಾಸ, ಯು.ಕೆ.ವಿಭೂತಿ, ಬಿ.ಡಿ.ಸೊಗಲಿ, ಶಿಕ್ಷೇತರ ಸಿಬ್ಬಂದಿಗಳಾದ ಎಂ.ಎಚ್.ಕಾಲೇಬಾಯಿ, ಎಸ್.ಜಿ.ಆಲತಗಿ, ಆರ್.ಎಲ್.ಬಬಲಿ ಆಗಮಿಸಲಿದ್ದು ಸತ್ಕಾರ ಕಾರ್ಯಕ್ರಮ ಜರುಗಲಿದೆ.
ಅಂದು ಮುಂಜಾನೆ ಶಾಲೆಗೆ ಭೇಟಿ ನೀಡುವುದು. ಪ್ರಾರ್ಥನೆ ಹಾಗೂ ಮರು ನೆನಪಿನ ತರಗತಿ ನಡೆಸಲಾಗುವುದು. ಉಪಹಾರ, ಅಗಲಿದ ಗುರುವೃಂದ ಹಾಗೂ ಮಿತ್ರರಿಗೆ ಶೃದ್ಧಾಂಜಲಿ, ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ, ಸರಸ್ವತಿ ಪೂಜೆ ಹಾಗೂ ಜ್ಯೋತಿ ಪ್ರಜ್ವಲನೆ, ಪರಸ್ಪರ ಪರಿಚಯ, ಸ್ನೇಹಿತರ ಅನಿಸಿಕೆ ,ಗುರುವಂದನೆ ,ಶಿಕ್ಷಕರ ಅನಿಸಿಕೆ ನಂತರ ಸ್ನೇಹಭೋಜನ ಹಾಗೂ ಸಂಜೆ ಮನರಂಜನೆಯ ಕಾರ್ಯಕ್ರಮಗಳು ಜರುಗಲಿವೆ ಎಂದು ಕಾರ್ಯಕ್ರಮದ ವಿವರ ನೀಡಿದರು.
ಈಗಾಗಲೇ ನಮ್ಮ ಶಾಲಾ ವಿದ್ಯಾರ್ಥಿಗಳ ಸಂಘದಿಂದ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ನಮಗೆ ನೀಡಿದ ಶಿಕ್ಷಕರ ಆಶಯದಂತೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ರಕ್ತದಾನ ಶಿಬಿರ ಹಾಗೂ ಪ್ರವಾಹ ಮತ್ತು ಕೋರಾನಾ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಬಂದಿದ್ದೇವೆ. ಮುಂದಿನ ದಿನಗಳನ್ನು ನಮ್ಮ ಸಂಘದಿಂದ ಶಾಲೆಯ ಜೀಣ್ರ್ಣೋದ್ದಾರ ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವುದರ ಜೊತೆಗೆ ಇತರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಅಶೋಕ ಕೌಜಲಗಿ, ಗೌರವಾಧ್ಯಕ್ಷ ಈಶ್ವರ ಯಕ್ಸಂಬಿ, ವಿದ್ಯಾರ್ಥಿ ಸಂಘದ ಸದಸ್ಯರಾದ ರಾಜಶೇಖರ ಹೆರಲಗಿ, ವಿಠ್ಠಲ ಕುರಿ, ರಜಾಕ ತಲವಾರ ಇದ್ದರು.

Related posts: