ಗೋಕಾಕ:ಕಸಾಪ ಮತದಾರ ಯಾದಿ ಪ್ರಕಟ: ಆಕ್ಷೇಪಣೆಗೆ ಆಹ್ವಾನ
ಕಸಾಪ ಮತದಾರ ಯಾದಿ ಪ್ರಕಟ: ಆಕ್ಷೇಪಣೆಗೆ ಆಹ್ವಾನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 20 :
ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ 2021ರ ಕುರಿತಾಗಿ ಈಗಾಗಲೇ ಮತದಾರ ಪಟ್ಟಿಯನ್ನು ಪ್ರಚುರ ಪಡಿಸಲಾಗಿದ್ದು,ಮತದಾರ ಯಾದಿಗೆ ತಮ್ಮಿಂದ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಅವುಗಳನ್ನು ಕಸಾಪ8(ಅ) ನಮೂದಿಸಿ ಅರ್ಜಿಗಳಲ್ಲಿ ಅಥವಾ ಮನವಿ ರೂಪದಲ್ಲಿ ಸ್ಪಷ್ಟವಾಗಿ ಕನ್ನಡದಲ್ಲಿ ಲಿಖಿತವಾಗಿ ಬರೆದು ತಾಲೂಕಾ ಸಹಾಯಕ ಚುನಾವಣೆ ಅಧಿಕಾರಿಗಳು(ತಹಶೀಲದಾರ ಗೋಕಾಕ) ಇವರಿಗೆ ದಿ.22ರಂದು ಸೋಮವಾರದೊಳಗಾಗಿ ಸಲ್ಲಿಸಲು ಈ ಮೂಲಕ ಕಸಾಪ ಸದಸ್ಯರಿಗೆ ತಿಳಿಯಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗೋಕಾಕ ತಹಶೀಲ್ದಾರ ದೊರವಾಣಿ ಸಂಖ್ಯೆ: 08332-225073 ಹಾಗೂ ಮೊಬೈಲ ನಂ.9035751594 ಸಂಪರ್ಕಿಸಲು ಕೋರಲಾಗಿದೆ.